ಸುದ್ದಿಬಿಂದು ಬ್ಯೂರೋ ವರದಿ (Digital News)
ಬೆಳಗಾವಿ : ಪತ್ನಿ ಕಾಟಕ್ಕೆ ಬೇಸತ್ತು ಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಅನಗೋಳದ ದುರ್ಗಾ ಕಾಲೋನಿಯಲ್ಲಿ ನಡೆದಿದೆ. ಕಂಪ್ಯೂಟರ್ ಶಾಪ್ ನಲ್ಲಿ ವೈಯರ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಸುನೀಲ್ ಮೂಲಿಮನಿ(33) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಪತ್ನಿ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಾಲ್ಕು ವರ್ಷದ ಹಿಂದೆ ಪೂಜಾ ಎಂಬಾಕೆಯನ್ನ ಸುನೀಲ್ ವಿವಾಹವಾಗಿದ್ದ.ಮೂರು ವರ್ಷದ ಒಂದು ಮಗು ಇದ್ದು ಆತ್ಮಹತ್ಯೆ ಮಾಡಿಕೊಂಡ ಸುನೀಲ್.
ಮೈ ವೈಫ್ ಈಜ್ ರಿಜನ್ ಫಾರ್ ಮೈ ಡೆತ್ ಎಂದು ಬರೆದಿಟ್ಟಿದ್ದಾನೆ.ಸಣ್ಣ ಸಣ್ಣ ವಿಚಾರಕ್ಕೂ ಪತ್ನಿ ಪತಿಯೊಂದಿಗೆ ಗಲಾಟೆ ಮಾಡಿಕೊಂಡು ಮುನಿಸಿಕೊಂಡು ಇರುತ್ತಿದ್ದಳು ಎನ್ನಲಾಗಿದೆ.
ಮೃತ ವ್ಯಕ್ತಿಯ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಇಡಲಾಗಿದೆ. ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ 108 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ
- ದೇಶಪಾಂಡೆ ವಿವಾದಾತ್ಮಕ ಹೇಳಿಕೆ : ಬಿಜೆಪಿ ರಾಜ್ಯ ಉಪಾಧ್ಯಕ್ಷ ರೂಪಾಲಿ ನಾಯ್ಕ ಖಂಡನೆ
- State Level Teacher Award: ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಿ ಆರ್ ನಾಯ್ಕ, ಗೋಪಾಲ ನಾಯ್ಕ ಸೇರಿ ಮೂವರು ಆಯ್ಕೆ
- ಕುಮಟಾದಲ್ಲಿ ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆ ವಿರೋಧಿಸಿದ ವ್ಯಕ್ತಿಗೆ ಪೊಲೀಸರ ಎದುರೆ ಹಲ್ಲೆ
- Lunar Eclipse 2025:ಸೆಪ್ಟಂಬರ್ 7ಕ್ಕೆ ಮಧ್ಯಾಹ್ನದ ಬಳಿಕ ಭೋಜನ ಮಾಡುವಂತಿಲ್ಲ