ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ರಾಜ್ಯದಲ್ಲಿ ನಿನ್ನೆಯಿಂದ ಇಂದು ಬೆಳಿಗ್ಗೆ ತನಕ ಧಾರಾಕಾರವಾಗಿ ಮಳೆಯಾಗಿದ್ದು, ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡಲ್ಲಿ ವ್ಯಾಪಕ ಮಳೆ ಸುರಿದಿದೆ. ರಾಜ್ಯದ ಯಾವ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗಿದೆ ಎನ್ನುವುದನ್ನ ನೋಡೋದಾದರೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾರುಕೇರಿಯಲ್ಲಿ ಅತೀ ಹೆಚ್ಚು 150 ಮಿಮಿ ಮಳೆಯಾಗುವ ಮೂಲಕ ರಾಜ್ಯದಲ್ಲೆ ಅತೀ ಹೆಚ್ಚು ಮಳೆಸುರಿದ
ಇನ್ನೂ ಉಳಿದಂತೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ 119ಮಿಮಿ ಮಳೆಯಾಗಿದೆ. ದಕ್ಷಿಣಕನ್ನಡದ ದಕ್ಷಿಣ ಕನ್ನಡ ಬಂಟ್ವಾಳ ಬಾಳ್ತಿಲ ನಲ್ಲಿ 119ಮಿಮಿ ಮಳೆ ಸುರಿದಿದೆ.ಉತ್ತರ ಕನ್ನಡ ಹೊನ್ನಾವರ ಹೊಸಕುಳಿ ಗ್ರಾಮದಲ್ಲಿ 112.5 ಮಿಮಿ ಮಳೆಯಾಗಿದೆ.ಕುಮಟಾ ತಾಲೂಕಿನ ಹೆಗಡೆಯಲ್ಲಿ 107ಮಿ.ಮಿ ಮಳೆಯಾಗಿದ್ದರೆ ಭಟ್ಕಳ Qualification 106.5ಮಿಮಿ ಮಳೆಯಾಗಿದೆ. ಹೊನ್ನಾವರ_ಹಿರೇಅಂಗಡಿಯಲ್ಲಿ 105ಮಿ ಮಿ ಮಳೆಯಾಗಿದೆ.ಹೊನ್ನಾವರ ಖರ್ವಾ 104 ಮಿ ಮಿ ಮಳೆಯಾಗಿದೆ.ಭಟ್ಕಳ ಬೈಲೂರು ಭಾಗದಲ್ಲಿ 103.5 ಮಿ ಮಿ ಮಳೆಯಾಗಿದೆ.ಹೊನ್ನಾವರ ಸಾಲ್ಕೋಡು 101 ಮಿ ಮಿ ಮಳೆ ಆದರ ಮೇಲಿನ ಇಡಗುಂಜಿಯಲ್ಲಿ 100 ಮಿ ಮಿ ಮಳೆಯಾಗಿದೆ. ಈ ಮೂಲಕ ದಿನದ 24ಗಂಟೆಯಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲೇ ಅತೀ ಹೆಚ್ಚು ಮಳೆ ಸುರಿದಂತಾಗಿದೆ.
ಜಿಲ್ಲೆಯಲ್ಲಿ ಇನ್ನೂ ಕೂಡ ಮಳೆ ಆಗುತ್ತಿದ್ದು ನದಿ ತೀರದ ಹಾಗೂ ತಗ್ಗು ಪ್ರದೇಶದಲ್ಲಿನ ನಿವಾಸಿಗಳು ಆತಂಕದಲ್ಲಿರುವಂತಾಗಿದೆ. ಅರಬ್ಬೀ ಸಮುದ್ರದಲ್ಲಿ ಕಡಲ ಅಬ್ಬರ ಕೂಡ ಜೋರಾಗಿದ್ದು, ಕಾರವಾರದ ಮಾಜಾಳಿಯಿಂದ ಭಟ್ಕಳದ ತನಕ ಭಾರೀ ಪ್ರಮಾಣದಲ್ಲಿ ಕಡಲ್ಕೋರೆತ ಉಂಟಾಗಿದ್ದ, ಸಮುದ್ರದ ಅಂಚಿನ ಗ್ರಾಮಸ್ಥರು ಪ್ರತಿ ಕ್ಷಣಕ್ಕೂ ಭಯದಲ್ಲಿದ್ದಾರೆ. ಇನ್ನೂ ಮೂರ ನಾಲ್ಕು ದಿನಗಳ ಕಾಲ ಭಾರೀ ಮಳೆ ಆಗಲಿದೆ ಅಂತಾ ಈಗಾಗಲೇ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ
ಇದನ್ನೂ ಓದಿ