ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ : ನಗರದ ಇಎಸ್ಐ ಆಸ್ಪತ್ರೆಯ ಆವರಣದಲ್ಲಿ ಕಾರ್ಮಿಕ ನೋರ್ವನ ಮೇಲೆ ಮಂಗವೊಂದು ದಾಳಿ ನಡೆಸಿದ್ದು, ಆತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಎಸ್ಐ ಆಸ್ಪತ್ರೆಯ ಆವರಣದಲ್ಲಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ ಕಾರ್ಮಿಕ ತನ್ನ, ಕೆಲಸ ಮುಗಿಸಿ ಮನೆಗೆ ವಾಪಸ್ ಆಗಬೇಕು ಎನ್ನುವ ವೇಳೆ ಕಾರ್ಮಿಕನಾದ ಅಂಬೇವಾಡಿಯ ನವಗ್ರಾಮದ ನಿವಾಸಿ ಪ್ರವೀಣ್ ವೆಂಕಟೇಶ ವಾಸಂದರ ಎಂಬುವವರ ಮೇಲೆ ಮಂಗ ದಾಳಿ ನಡೆಸಿದ ಮಂಗ ಆತನ ಕಾಲಿಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ.ಮಂಗನ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡ ಪ್ರವೀಣ್ ಅವರನ್ನ ತಕ್ಷಣ ಇಎಸ್ಐ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಮಂಗನ ದಾಳಿಗೆ ಒಳಗಾಗಿರುವ ಪ್ರವೀಣ ಕುಟುಂಬಕ್ಕೆಅರಣ್ಯ ಇಲಾಖೆಯಿಂದ ಪರಿಹಾರ ನೀಡುವುದರ ಜೊತೆಗೆ ಜನರಿಗೆ ಕಾಟ ನೀಡುತ್ತಿರುವ ಮಂಗಗಳನ್ನ ಹಿಡಿದು ಬೇರೆ ಕಡೆ ಬಿಡುವ ಕೆಲಸ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ
- ಅನೈತಿಕ ಸಂಬಂಧ..ಕಾಡಿನಲ್ಲಿ ಭೀಕರ ಕೃತ್ಯ..!ಹಿಗ್ಗಾಮುಗ್ಗ ಥಳಿಸಿದ ವಿಡಿಯೋ ವೈರಲ್
- ಮೃತ ರಾಮಚಂದ್ರ ಗೌಡ ಮನೆಗೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಭೇಟಿ: ಸಾಂತ್ವನ ಹೇಳಿ ಧನಸಹಾಯ
- ಕಾಡುಪ್ರಾಣಿಯ ಮಾಂಸ ಸಾಗಾಟ: ದ್ವಿಚಕ್ರ ವಾಹನ ಸಹಿತ ಆರೋಪಿಯ ಬಂಧನ
- Kumta Crime News/ಕುಮಟಾದಲ್ಲಿ ಜಮೀನು ವಿವಾದ ಕೊಲೆಯಲ್ಲಿ ಅಂತ್ಯ
.




