ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ: ಇಲ್ಲಿಮ ಮುಖ್ಯ ಕಡಲ ತೀರದಲ್ಲಿ ಈಜಾಡುತ್ತಿದ್ದ ಬೆಂಗಳೂರಿನ ಖಾಸಗಿ ಕಂಪನಿಯೊಂದರ ಪ್ರವಾಸಿಗರಿಬ್ಬರು ಸಮುದ್ರದ ಸುಳಿಗೆ ಸಿಲುಕಿ ಅಪಾಯದಲ್ಲಿದ್ದ ಪ್ರವಾಸಿಗರನ್ನ ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಜೀವ ರಕ್ಷಕ ಸಿಬ್ಬಂದಿಗಳ ಸಮಯೋಚಿತ ಕಾರ್ಯಾಚರಣೆಯಿಂದ ಇಬ್ಬರ ಜೀವ ರಕ್ಷಣೆ ಮಾಡಲಾಗಿದೆ..ಸುಮಾರು 10 ಮಂದಿ ಸ್ನೇಹಿತರು ಸೇರಿ ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದು, ಮುಖ್ಯ ಕಡಲ ತೀರದಲ್ಲಿ ಈಜಾಡುತ್ತಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿ ಅಪಾಯಕ್ಕೆ ಒಳಗಾಗಿದ್ದರು.ಇದನ್ನ ಗಮನಿಸಿದ ಲೈಪ್ ಗಾರ್ಡ್ ಸಿಬ್ಬಂದಿಗಳು ಪ್ರವಾಸಿಗರಾದ ಸಂಗಮೇಶ್ ರಾಜಪ್ಪ ಪಾಟೀಲ್ (23) ಬೀದರ್ ಜಿಲ್ಲೆ ಹಾಗೂ ಜಯಪ್ರಕಾಶ್ (23) ಗುಲ್ಬರ್ಗ ಎಂಬುವವರನ್ನ ರಕ್ಷಣೆ ಮಾಡಲಾಗಿದೆ.
ನೀರಿನಲ್ಲಿ ಮುಳುಗುತ್ತಿರುವ ದೃಶ್ಯವನ್ನು ಗಮನಿಸಿದ ಜೀವ ರಕ್ಷಕ ಸಿಬ್ಬಂದಿಗಳು ತಕ್ಷಣ ನೀರಿಗೆ ಧುಮುಕಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿಗಳಾದ ರೋಷನ್ ಖಾರ್ವಿ, ಶಿವಪ್ರಸಾದ ಅಂಬಿಗ, ಮೋಹನ ಅಂಬಿಗ, ಲೊಕೇಶ ಹರಿಕಂತ್ರ ಹಾಗೂ ಬೀಚ್ ಸೂಪರ್ವೈಸರ್ ರವಿ ನಾಯ್ಕ್ ಅವರ ನೇತೃತ್ವದಲ್ಲಿ ಪ್ರವಾಸಿ ಮಿತ್ರರಾದ ಶೇಖರ್ ಹರಿಕಂತ್ರ ಮತ್ತು ಗಜೇಂದ್ರ ಗೌಡ ಅವರುಗಳ ಸಹಕಾರದಿಂದ ಇಬ್ಬರನ್ನೂ ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳಾದ ಜಗ್ಗು ಹರಿಕಂತ್ರ, ಮಹೇಶ್ ಹರಿಕಂತ್ರ, ಕಮಲಾಕರ ಹೊಸಕಟ್ಟ, ಸಚಿನ್ ಹರಿಕಂತ್ರ, ಮಹಾಬಲೇಶ್ವರ ಹರಿಕಂತ್ರ ಹಾಗೂ ಗೃಹ ರಕ್ಷಕ ಸಿಬ್ಬಂದಿ ಗಜಾನನ್ ನಾಗೇಕರ್ ಅವರುಗಳು ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡಿದರು.
ಪ್ರವಾಸಿಗರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಜೀವ ರಕ್ಷಕ ಸಿಬ್ಬಂದಿಗಳ ಕಾರ್ಯಕ್ಷಮತೆ ಹಾಗೂ ಸ್ಪಂದನೆಗೆ ಸ್ಥಳೀಯರು ಮತ್ತು ಪ್ರವಾಸಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ/ಮಗನಿಂದಲೇ ವೃದ್ಧ ತಂದೆಗೆ ಚಾಕು ಇರಿತ: ಮೊಕ್ಕಳ ವಿಚಾರಕ್ಕೆ ಗಲಾಟೆ


