ಸುದ್ದಿಬಿಂದು ಬ್ಯೂರೋ ವರದಿ
Karwar/ಕಾರವಾರ : ನಗರದ ರವೀಂದ್ರನಾಥ‌ ಠಾಗೋರ ಕಡಲತೀರಲ್ಲಿ ಡಿಸೇಂಬರ್ 22 ರಿಂದ 28 ರವರೆಗೆ 7 ದಿನಗಳವರೆಗೆ ಹಮ್ಮಿಕೊಳ್ಳಲಾಗಿರುವ ಕರಾವಳಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಕಲಾವಿದರು ಡಿಸೆಂಬರ್ 11 ರ ಒಳಗೆ ತಮ್ಮ ಅರ್ಜಿಯೊಂದಿಗೆ, ಕಾರ್ಯಕ್ರಮ ನೀಡಿದ ದಾಖಲೆಗಳನ್ನು ಲಗತ್ತಿಸಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಕಛೇರಿಗೆ ನೀಡುವುದು. ಮತ್ತು ಕಚೇರಿಯ ಇ ಮೇಲ್ ವಿಳಾಸ dkc.karwar@gmali.com ಗೆ ಕಳಿಸಬಹುದು.

ಡಿಸೇಂಬರ್ 13 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆಯ್ಕೆ ಸಮಿತಿಯ ಮೂಲಕ, ಸಾಮಾಜಿಕ ಅರಣ್ಯ ವಿಭಾಗದ ಸಭಾಂಗಣ, ಕೋಡಿಭಾಗ, ಕಾರವಾರ ಇಲ್ಲಿ ಅಡಿಷನ್ ಮೂಲಕ ಅರ್ಹ ಕಲಾವಿದರನ್ನು ಅಂತಿಮಗೊಳಿಸಲಾಗುವುದು ಎಂದು ಸದಸ್ಯ ಕಾರ್ಯದರ್ಶಿ
ಕರಾವಳಿ ಉತ್ಸವ ವೇದಿಕೆ/ ಸಾಂಸ್ಕೃತಿಕ ಮತ್ತು ಕ್ರೀಡಾಸಮಿತಿ ಹಾಗೂ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ ಪ್ರಕಟಣೆ ತಿಳಿಸಿದೆ.