ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ನಾನು ವೀಣಾ ಪೂಜಾರಿ ನನ್ನ ಪತಿ ಮಂಜುನಾಥ ಜೀ ನಾಯ್ಕ‌ ನಾವಿಬ್ಬರೂ ಜೊತೆಯಲ್ಲೇ ಕುಳಿತು ಈ ಪತ್ರ‌ ಬರೆಯುತ್ತಿದ್ದೇವೆ. ನನ್ನ ಗಂಡ ಅರಣ್ಯ ಇಲಾಖೆಯಲ್ಲಿ ಕಳೆದ 30 ವರ್ಷದಿಂದ ಚಾಲಕರಾಗಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಗೇರಸೊಪ್ಪ‌ RFO ಕಾರ್ತಿಕ ಕಾಂಬ್ಳೆ ಕಿರುಕುಳ ನೀಡುತ್ತಿದ್ದು ಇದರಿಂದಾಗಿ ನಾನು ನನ್ನ ಪತಿ ಇಬ್ಬರೂ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಇದಕ್ಕೆ RFO ಕಾರ್ತಿಕ ಕಾಂಬ್ಳೆ ಹಾಗೂ DFO ಯೋಗಿಶ್ ಕಾರಣ ಅಂತಾ ಪತ್ರವೊಂದನ್ನ ಬರೆದಿಟ್ಟು ಮಂಜುನಾಥ ನಾಯ್ಕ ದಂಪತಿ ನಾಪತ್ತೆಯಾಗಿದ್ದಾರೆ.

ಕೆರೆಕೋಣದ ಮಂಜುನಾಥ ನಾಯ್ಕ ಅವರು ಕಳೆದ ಮೂವತ್ತು ವರ್ಷದಿಂದ ಹೊನ್ನಾವರ  ತಾಲೂಕಿನ ಗೇರುಸೊಪ್ಪ ವಲಯ ಅರಣ್ಯ ಇಲಾಖೆಯಲ್ಲಿ ಕ್ಷೇಮಾಭಿವೃದ್ಧಿ ಅಧಿಸೂಚಿತ ನೌಕರರಾಗಿ ಚಾಲಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕಳೆದ ಒಂದುವರೆ ವರ್ಷದ ಹಿಂದೆ ಗೇರಸೊಪ್ಪ ಅರಣ್ಯ ಇಲಾಖೆಗೆ RFO ಆಗಿ ಬಂದ ಕಾರ್ತಿ ಕಾಂಬ್ಬೆಯವರು ಚಾಲಕ‌ ಮಂಜುನಾಥ ಗಣಪತಿ ನಾಯ್ಕ ಅವರಿಗೆ ಇಂದಿನಿಂದ ನೀನು ಡ್ರೈವರ್ ಆಗಿ ಕೆಲಸ ಮಾಡೋದು ಬೇಡ. ಕಚೇರಿಯಲ್ಲಿ ಅಡುಗೆ ಮಾಡೊಂಡು ಇರಬೇಕು. ಎಂದಿದ್ದಾರೆನ್ನಲಾಗಿದೆ. ಇದಕ್ಕೆ ಮಂಜುನಾಥ ನಾಯ್ಕ ನಾನು ಚಾಲಕನಾಗಿ ಸೇರಿರುವವನು ಮತ್ತು ಅಡುಗೆ ಮಾಡೋದಕ್ಕೆ ಬರುವುದಿಲ್ಲ ಎಂದಿದ್ದಾರಂತೆ.

ಆದರೂ ಅವರ ಮಾತು ಕೇಳದ RFO ಅವರು ಕೆಲ ತಿಂಗಳುಗಳ ಕಾಲ ಖಾಲಿ ಇರಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಮಂಜುನಾಥ ನಾಯ್ಕ ಅವರು ಸಂಘದ ರಾಜ್ಯಾಧ್ಯಕ್ಷರಿಗೂ RFO ಅವರಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಪತ್ರ ಬರೆದಿದ್ದರು ಎನ್ನಲಾಗಿದೆ. ಬಳಿಕ ರಾಜ್ಯಾಧ್ಯಕ್ಷರು ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಪುನಃ ಮಂಜುನಾಥ ನಾಯ್ಕ ಅವರಿಗೆ ಡ್ರೈವರ್ ಕೆಲಸ ಕೊಡಿಸುವ ಭರವಸೆ ನೀಡಿದ್ದರಂತೆ. ಆದರೆ ಹಿರಿಯ ಅಧಿಕಾರಿಗಳು ಹೇಳಿದರು RFO ಮಂಜುನಾಥ ನಾಯ್ಕ ಅವರಿಗೆ ಡ್ರೈವೈವರ ಕೆಲಸ ಕೊಡಿಸದೆ.  ಕಚೇರಿಯಲ್ಲಿ ಕೆಟ್ಟದಾಗಿ ಮಾತನಾಡುವುದು ಎಲ್ಲರ ಎದುರು ಅವಮಾನಿಸುವ ಕೆಲಸ ಮಾಡುತ್ತಿದ್ದರೂ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಅಧಿಕಾರಿಯ ಕಿರುಕುಳದಿಂದ ನೋಂದ ನಾನು ಹಾಗೂ ಪತಿ ಇಬ್ಬರೂ ಎಲ್ಲಿಯಾದರೂ ದೂರ ಹೋಗಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಮಾಡಿಯೇ ಈ ಪತ್ರ ಬರೆದಿಟ್ಟು ನವೆಂಬರ್ 26ರಂದು ಮನೆಯಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ  ವಿನೋಧ ನಾಯ್ಕ ಎಂಬುವವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಮಂಜುನಾಥ ದಂಪತಿಯನ್ನ ಹುಡುಕಿ ಕೊಡುವಂತೆ ದೂರು ದಾಖಲಿಸಿದ್ದಾರೆ.

ಪ್ರಕರಣ ತೆಗೆದುಕೊಂಡ ಹೊನ್ನಾವರ ಪೊಲೀಸರು ತನಿಖೆ ನಡೆಸುತ್ತಿದ್ದು, ಪೊಲೀಸರ ತನಿಖೆಯ ನಂತರವಷ್ಟೆ ಪ್ರಕರಣ ಸತ್ಯಾಸತ್ಯತೆ ಹೊರಬರಬೇಕಿದೆ.

Honnavar: “I am Veena Poojari. My husband Manjunath G. Naik and I are writing this letter together. My husband has been working as a daily-wage driver in the Forest Department for the past 30 years. But RFO Kartik Kamble of Gerasoppa has been continually harassing him. Unable to bear this harassment any longer, both of us have decided to end our lives. RFO Kartik Kamble and DFO Yogesh will be responsible for our death.”

Leaving behind this letter, Manjunath Naik and his wife have gone missing.

Manjunath Naik of Kerekona has been working as a driver under the welfare scheme in the Gerasoppa range of the Honnavar Forest Department for the past thirty years. About one and a half years ago, after RFO Kartik Kamble took charge of the Gerasoppa Forest Range, he allegedly told driver Manjunath Ganapati Naik, “From today, you should not work as a driver. You must work as a cook in the office.”

Manjunath reportedly responded saying, “I joined as a driver and I do not know how to cook.”

Despite this, the RFO allegedly kept him without work for several months. It is said that Manjunath had written to the state president of the union regarding the harassment he faced from the RFO. After this, the union president spoke to senior officials and assured that Manjunath would be reinstated as a driver. But according to the letter, the RFO did not assign him driver duties and continued to insult and humiliate him in front of others in the office.

Due to this alleged harassment, the couple wrote in the letter that they had decided to go far away and end their lives by jumping into a river. On November 26, the couple went missing from their home.

Following this, a person named Vinodh Naik filed a complaint at the Honnavar Police Station seeking help to trace Manjunath and his wife.

The Honnavar Police have registered a case and begun an investigation. The truth behind the incident will be known only after the police complete their probe.

ಇದನ್ನೂ ಓದಿ/ಕಾರವಾರದಲ್ಲಿ ಬಹು ನಿರೀಕ್ಷಿತ ಕರಾವಳಿ ಉತ್ಸವ ರೀಎಂಟ್ರಿ: ಡಿಸೆಂಬರ್ 22ಕ್ಕೆ ಸಿಎಂ ಚಾಲನೆ