ಸುದ್ದಿಬಿಂದು ಬ್ಯೂರೋ ವರದಿ
ಗೋವಾ: ಭೋಗ ಭೂಮಿ ಗೋವಾ ಎಂದು ಪ್ರಖ್ಯಾತವಾಗಿರುವದನ್ನು ಪರಿವರ್ತನೆ ಮಾಡಿ ಇದೊಂದು ಪುಣ್ಯಭೂಮಿ, ತ್ಯಾಗ ಭೂಮಿ ಸಾತ್ವಿಕ ಭೂಮಿಯನ್ನಾಗಿ ಪರಿವರ್ತನೆ ಮಾಡಲು ಪರ್ತಗಾಳಿ ಮಠದ ಶ್ರೀಮದ್ ವಿದ್ಯಾಧೀಶ ತೀರ್ಥರು ಸಂಕಲ್ಪ ತೊಟ್ಟಿದ್ದು ಮುಂದಿನ ದಿನಗಳಲ್ಲಿ ಅದು ಈಡೆರಲಿ ಎಂದು ಜಗದ್ಗುರು ಪಲಿಮಾರು ಮಠ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮಿಜಿಯವರು ಹೇಳಿದರು.
ಅವರು ಸಾರ್ಧಪಂಚಶತಮಾನೋತ್ಸವದ ಅಂಗವಾಗಿ ಗೋವಾದ ಪರ್ತಗಾಳಿಯಲ್ಲಿ ನಡೆಯುತ್ತಿರುವ 550ನೇ ವರ್ಷದ ಸಂಭ್ರಮಾಚರಣೆಯಲ್ಲಿ ನಡೆದ ಧರ್ಮ ಸಭೇಯಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು. ಮೊದಲು ನೋಡಿದ ಪರ್ತಗಾಳಿ ಈಗ ನೋಡುವ ಪರ್ತಗಾಳಿ ಅಜಗಜಾಂತರ ವ್ಯತ್ಯಾಸವಾಗಿದೆ. ಹೊಸ ಪರ್ತಗಾಳಿ ನೀಡುವ ಮೂಲಕ ಗುರುಗಳು ಪರಿವರ್ತನೆಗೆ ನಾಂದಿ ಹಾಡಿದ್ದಾರೆ. ರಾಮಚಂದ್ರ ತೀರ್ಥರು ಮಾದವ ಎನ್ನುವ ವಟುವಿಗೆ ಸನ್ಯಾಸ ಧೀಕ್ಷೆ ಮಾತ್ರವಲ್ಲದೆ ಪೀಠಾಧಿಪತ್ಯವನ್ನು ನೀಡಿ ನಾರಾಯಣ ತೀರ್ಥರನ್ನಾಗಿ ಅನುಗ್ರಹಿಸಿದ್ದಾರೆ.
ಜಗತ್ತಿನಲ್ಲೆ ಬದರಿಯಂತಹ ಶ್ರೇಷ್ಠ ಕ್ಷೇತ್ರದಲ್ಲಿ ಪ್ರಣವ ಮಂತ್ರವನ್ನು ಉಪದೇಶಿಸಿ ಸನ್ಯಾಸತ್ವವನ್ನು ನೀಡಿದ್ದು ಸಮಾಜಕ್ಕೆ ಸಿಕ್ಕಿದ ದೊಡ್ಡ ಭಾಗ್ಯ. ನಾರಾಯಣ ತೀರ್ಥರು ಆಶ್ರಮವನ್ನು ಹೇಗೆ ಅಲ್ಲಿ ಸ್ಥಾಪಿಸಿದರೊ ಹಾಗೆ ನಮ್ಮ ವಿದ್ಯಾಧೀಶ ತೀರ್ಥರು ದಿಗ್ವಿಜಯ ರಾಮನನ್ನು ಶಿಮವತ್ ಪರ್ವತದಿಂದ ಆರಂಭಿಸಿ ದಕ್ಷಿಣದ ಕೊನೆಯ ತನಕ ಕರೆದುಕೊಂಡು ಬಂದು ರಾಮದೇವರ ಪ್ರತಿಷ್ಟೆ ಮಾಡಲಿದ್ದಾರೆ ಎಂದರೆ ಅವರಿಗೆ ಎಲ್ಲಾ 23ಯತಿಗಳ ಅನುಗ್ರಹ ವಾಗಿದೆ. ಐದು ಗಂಗೆಗಳು ಕೂಡುವ ಸ್ಥಳದಲ್ಲಿ ಮಠ ಪ್ರಾಪ್ತವಾಗಿದ್ದು ಈ ಬಾರಿ ಅಲ್ಲಿ ಚಾತುರ್ಮಾಸ ವೃತ ನಡೆಸಿ ಎಲ್ಲಾ ಭಕ್ತರು ಅಲ್ಲಿ ಬಂದು ಸಾಲಿಗ್ರಾಮದ ಸ್ಪರ್ಶ ಮಡುವ ಅವಕಾಶ ಕಲ್ಪಿಸಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದಾರೆ.
ಅಯೋಧ್ಯೆಯಲ್ಲಿ ಯಾರು ರಾಮನನ್ನು ಪ್ರತಿಷ್ಟಾಪನೆ ಮಾಡಿದರೊ ಅವರೆ ಪರ್ತಗಾಳಿಯಲ್ಲಿ 77 ಅಡಿ ಎತ್ತರದ ವಿಗ್ರಹವನ್ನು ಅನಾವರಣ ಮಾಡಲಿದ್ದಾರೆ. 7ಅಂದರೆ ರಾಮನ ಸಂಖ್ಯೆ, ರಾಮಾಯಣದಲಿ 7 ಕಾಂಡಗಳಿವೆ ಅದನ್ನೆ ನೆನಪಿಸುವ 7ಮತ್ತು 7ಅಡಿ ರಾಮನ ಪ್ರತಿಮೆ ಅನಾವರಣವಾಗಲಿದೆ. ರಾಮನ ಕೈಯಲ್ಕಿ ಬಿಲ್ಲು ಇದೆ ಬಾಣ ಇದೆ. ಒಮ್ಮೆ ಬಾಣ ಎತ್ತಿದರೆ ಯಾರಾದರೂ ಬೀಳಲೆಬೇಕು. ಯಾರು ಬೀಳಬೇಕು ಎಂದರೆ ತಾಂಡವ ನೃತ್ಯ ಮಾಡುವ, ಉಗ್ರ ಕೃತ್ಯ ಇಳಿದಿರುವ ಸಮುದಾಯ ಕೆಳಗೆ ಬೀಳಬೇಕು. ಸನಾತನ ಧರ್ಮವನ್ನು ದೂಷಣೆ ಮಾಡುವಂತಹ ದುಷ್ಟ ಶಕ್ತಿಗಳ ಧಮನವಾಗಬೇಕು. ರಾಮನ ಎದುರಿನಲ್ಲಿ ಧರ್ಮಧ್ವಜ ಹಾರಾಡುತ್ತಾ ಇದೆ ಎಂದರೆ ಇನ್ನೂ ಭಾರತಕ್ಕೆ ಭಯವಿಲ್ಲ. ಪರ್ತಗಾಳಿಯಲ್ಲೂ ರಾಮ ಬಿಲ್ಲೂ ಬಾಣ ಹಿಡಿದು ಸನಾತನ ಧರ್ಮವನ್ನು ರಕ್ಷಣೆ ಮಾಡಲಿ, ಉಗ್ರರ ತಲೆ ದಂಡವಾಗಲಿ, ಸಮಾನ ನಾಗರಿಕೆ ಸಂಹಿತೆ ಮತ್ತೊಮೆ ಬರಲಿ ಎಂದು ಹಾರೈಸುತ್ತೆನೆ. ಈ ಎಲ್ಲಾ ಕಾರ್ಯಗಳಿಗೂ 550 ವರ್ಷದ ಉತ್ಸವ ನಾಂದಿಯಾಗಲಿ ಎಂದು ಭಕ್ತರಿಗೆ ಆಶೀರ್ವಚನ ನೀಡಿದರು.
ಆರಂಭದಲ್ಲಿ ಪಲಿಮಾರು ಮಠದ ಪಟ್ಟಶಿಷ್ಯ ಶ್ರೀಮದ್ ವಿದ್ಯಾರಾಜೇಶ್ವರ ಸ್ವಾಮಿಜಿಯವರು ಆಶೀರ್ವಚನ ನೀಡಿ ಪರ್ತಗಾಳಿ ಎನ್ನುವದು ಒಂದು ಪವಿತ್ರಗಾಳಿಯಾಗಿದೆ. ಇಲ್ಲಿ ರಾಮನ ನೆಲೆ, ಮಠದ ದೇವರ 550 ವರ್ಷದ ಸಂಭ್ರಮಾಚರಣೆ ನಡೆಯಲಿದೆ. ಜಿಎಸ್ ಬಿ ಸಮಾಜವನ್ನು ಮುನ್ನಡೆಸುವ ಗುರುಗಳು ಒಂದೆ ಆದೇಶ ಮಾಡಿದರೂ ಸಮಾಜ ಬಾಂಧವರು ಪಾಲಿಸುತ್ತಾರೆ. ಬಟ್ಟೆಯಲ್ಲಿದ ಬಣ್ಣವನ್ನು ಹೇಗೆ ಬೇರೆ ಮಾಡಲೂ ಸಾದ್ಯವಿಲ್ಲವೊ ಹಾಗೆ ಉಭಯ ಮಠಗಳ ಬಾಂಧವ್ಯ ವೃದ್ದಿಸಲಿದೆ ಎಂದು ಅವರು ಆಶೀರ್ವಚನ ನೀಡಿದರು.
ಕೊನೆಯಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮಿಜೀ ಆಶೀರ್ವಚನ ನೀಡಿ ಪಲಿಮಾರು ಮಠದ ಉಭಯ ಶ್ರೀಗಳ ಸಂಗಮ ಮಾತ್ರವಲ್ಲದೆ ಉಭಯ ಮಠಗಳ ಆರಾಧ್ಯ ದೇವರ ಸಂಗಮವೂ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಯವರು ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಟೆ ಮಾಡುವಾಗ ಅಷ್ಟಮಠದ ಯತಿಗಳಲ್ಲಿ ಒಬ್ಬರಾದ ಪೇಜಾವರ ಮಠದ ಯತಿಗಳು ಅಲ್ಲಿದ್ದರು. ಇಲ್ಲಿಯೂ ರಾಮನ ಪ್ರತಿಮೆ ಅನಾವರಣ ಮಾಡುವಾಗ ಅಷ್ಟಮಠದ ಉಭಯ ಗುರುಗಳ ಆಗಮನವಾಗಿರುವದು ಇದೊಂದು ಸುಯೋಗ. ನರೇಂದ್ರ ಮೋದಿಯವರು ಕೃಷ್ಣನ ದರ್ಶನ ಪಡೆದು ಮೂರ್ತಿ ಅನಾವರಣ ಮಾಡಲಿದ್ದಾರೆ. ಪಲಿಮಾರು ಮಠದಿಂದಲೆ ಪರ್ತಗಾಳಿ ಮಠದ ಬೇರು ಆರಂಭವಾಹಿದ್ದು ಮೊದಲ ಗೌರವ ಪಲಿಮಾರು ಮಠಕ್ಕೆ ಸಿಗಬೇಕು ಎನ್ನುವ ಉದ್ದೇಶದಿಂದ ಮೊದಲ ಧರ್ಮ ಸಭೆಯಲ್ಲಿ ಗುರುಗಳ ಅನುಗ್ರಹವಾಗಿದೆ.
ಮುಂದೆಯೂ ಇದು ಪುಣ್ಯಭೂಮಿಯಾಗಬೇಕು ಎಂದರೆ ಗುರುಗಳ ಆಗಮನವಾಗುತ್ತಲೆ ಇರಬೇಕು ಎಂದು ಆಮಂತ್ರಣ ನೀಡಿದರು. ಈ ಸಂದರ್ಬದಲ್ಲಿ ಗಣ್ಯರಾದ ಶಿವಾನಂದ ಸಾಲಗಾಂವಕರ್, ಪ್ರದೀಪ ಪೈ, ಮುಕುಂದ ಪೈ, ಟಿ.ವಿ ಮೋಹನದಾಸ ಪೈ, ಕೆ ಉಲ್ಲಾಸ ಕಾಮತ ಇದ್ದರು. ರಾಮಕೃಷ್ಣ ಭಟ್ ಬ್ರಹ್ಮಾವರ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಹಳದಿಪರದ ಎಚ್ ಎನ್ ಪೈ ಕಾರ್ಯಕ್ರಮ ನಿರ್ವಹಿಸಿದರು.
Goa:Goa, popularly known as the land of pleasure, must be transformed into a sacred land, a land of sacrifice and purity. This is the resolve taken by the Pejawar Math’s Shrimad Vidyadhisha Teertha of Partagali Math, and may this resolve be fulfilled in the coming days, said Jagadguru Palimaru Math’s Shrimad Vidyadhisha Teertha Swamiji.
He delivered his blessings during the Dharmasabha held as part of the 550th anniversary celebrations at Partagali in Goa. “The Partagali we saw earlier and the Partagali we see today are vastly different. With the new Partagali taking shape, our Gurus have initiated a new wave of transformation. Ramachandra Teertha not only granted sannyasa deeksha to the young boy Madhava, but also bestowed upon him the Peethadhipathi status, naming him Narayana Teertha.
In the sacred land of Badari, the most esteemed pilgrimage center in the world, the Guru imparted the Pranava Mantra and conferred sannyasa, which is a great fortune for society. Just as Narayana Teertha established an ashram there, our Vidyadhisha Teertha will take Digvijaya Rama from the Shrimavath mountains to the southernmost end of the country and consecrate the deity. All 23 Yatis have blessed him for this endeavour. The Math located at the confluence of five rivers has now become the place for Chaturmasya Vrata, where devotees were given the divine opportunity to experience the sacred touch of the Shaligram and awaken spiritual consciousness.
The one who consecrated Lord Rama in Ayodhya will also unveil the 77-feet tall statue here in Partagali. The number 7 is associated with Rama — the Ramayana has 7 kandas. This 7×7 feet colossal idol of Rama symbolizes that. The Lord holds a bow and arrow, and once the arrow is raised, it must bring down those who engage in violent, destructive acts. Those who tarnish Sanatana Dharma must be subdued. If the Dharma-dhvaja continues to flutter before Rama, India has nothing to fear. May the Rama installed in Partagali, holding bow and arrow, protect Sanatana Dharma, bring an end to extremist ideologies, and pave the way once again for a Uniform Civil Code. May this 550-year celebration mark the beginning of all these auspicious undertakings,” he blessed.
At the beginning of the event, Palimaru Math’s successor-designate Shrimad Vidyarajeshwara Swamiji delivered his blessings, stating, “Partagali is a sacred land. This is the abode of Rama, and the 550-year celebration of the Math will be grand. When the Gurus who lead the GSB community issue a directive, the community wholeheartedly follows. Just like the color in cloth cannot be separated, the bond between the two Maths will only strengthen,” he said.
In conclusion, Shrimad Vidyadhisha Teertha Swamiji of Shri Samsthan Gokarna Partagali Math stated, “This is not just a union of the two Gurus of the Palimaru and Partagali Maths, but also a union of the deities worshipped in both Maths. When Prime Minister Narendra Modi performed the consecration of Rama in Ayodhya, one of the Ashta Matha Swamijis—the Pejawar Swamiji—was also present. Similarly, for the unveiling of Rama’s statue here, the arrival of Gurus from both Maths is a divine blessing. Prime Minister Narendra Modi will have Krishna’s darshan and unveil the statue. Since the roots of the Partagali Math lie in the Palimaru lineage, the first honor must go to Palimaru Math, and hence the blessings of the Gurus were invoked in the very first Dharma Sabha.”
He extended an invitation saying that for Partagali to remain a sacred land, the presence and blessings of the Gurus must continue.
Notable attendees included Shivananada Salgaocar, Pradeep Pai, Mukund Pai, T.V. Mohanadas Pai, and K. Ullas Kamath. Ramakrishna Bhat Brahmavara delivered the introductory address, and H.N. Pai of Haladi managed the proceedings.
ಇದನ್ನೂ ಓದಿ / ರಾಮನಗರ ಕಾರವಾರ ಹೆದ್ದಾರಿಯಲ್ಲಿ ಬೆಂಕಿ ಅವಘಢ : ಹೊಟೇಲ್ ಭಸ್ಮ




