ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.ಶ್ವಾಸಕೋಶ ಸಂಬಂಧಿತ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೆಹಲಿಯಲ್ಲಿರುವ ಸಿಎಂ ಸಿದ್ದರಾಮಯ್ಯ ತಕ್ಷಣ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ರಾತ್ರಿ ವೇಳೆ ಅವರು ನೇರವಾಗಿ ಆಸ್ಪತ್ರೆಗೆ ಆಗಮಿಸುವ ಸಾಧ್ಯತೆ ಇದೆ. ಚಿಕಿತ್ಸೆಗಾಗಿ ಅವರನ್ನು ಐಸಿಯೂಗೆ ಸ್ಥಳಾಂತರಿಸಲಾಗಿದ್ದು, ವಿಶೇಷ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗಿದೆ.
ತಾಯಿ ಪಾರ್ವತಿ ಅವರ ಆರೋಗ್ಯ ವಿಚಾರಿಸಲು ಪುತ್ರ ಡಾ.ಯತೀಂದ್ರ ಆಸ್ಪತ್ರೆಗೆ ಭೇಟಿ ನೀಡಿದ್ದು, ಶಾಸಕ ಶಿವಲಿಂಗೇಗೌಡರೂ ಆಸ್ಪತ್ರೆಗೆ ಬಂದು ಆರೋಗ್ಯ ಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ.ಆಸ್ಪತ್ರೆಯ ಮೂಲಗಳ ಪ್ರಕಾರ, ಪಾರ್ವತಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.
CM’ Wife Parvati Hospitalised Following Health Complications
Bengaluru: Karnataka Chief Minister Siddaramaiah’s wife, Parvati, has been admitted to a private hospital in Seshadripuram after experiencing health complications. She was admitted due to a respiratory-related issue.
Chief Minister Siddaramaiah, who is currently in Delhi, is rushing back to Bengaluru and is likely to visit the hospital directly late tonight. She has been shifted to the ICU for treatment, and a special team of doctors is attending to her.
Their son, Dr. Yathindra, visited the hospital to inquire about Parvati’s health. MLA Shivalingegowda also arrived at the hospital and collected information about her condition.According to hospital sources, Parvati’s health condition is said to be stable.
ಇದನ್ನೂ ಓದಿ/ನ 20ಕ್ಕೆ ಕಾರವಾರದಲ್ಲಿ ಕನಿಷ್ಠ ಪಿಂಚಣಿ ಹೆಚ್ಚಳಕ್ಕೆ ಆಗ್ರಹಿಸಿ ಸಮಾವೇಶ




