ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಸ್ಕೂಟಿ ಹಾಗೂ ಬುಲೆಟ್ ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿಯಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್‌ನಲ್ಲಿ ಇದ್ದ ಇಬ್ಬರೂ ಎಂಬಿಬಿಎಸ್ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಆರ್‌ಟಿಓ ಕಚೇರಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಅಪಘಾತದಲ್ಲಿ ಯಲ್ಲಾಪುರ ತಾಲೂಕಿನ ಇಡಗುಂದಿಯ ಚಿರಂಜೀವ್ ಬೃಹ್ಮಾನಂದ ಕುಂಜಿ (15) ಮೃತ ಯುವಕನಾಗಿದ್ದಾನೆ . ಸ್ಕೂಟಿಯಲ್ಲಿ ತಾಯಿ ಹಾಗೂ ಮಗ ಪ್ರಯಣಿಸುತ್ತಿದ್ದು, ಇನ್ಮೊಂದು ಬೈಕ್‌ನಲ್ಲಿ ಇಬ್ಬರೂ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮಾಜಾಳಿ ಕಡೆಯಿಂದ ಕಾರವಾರದತ್ತ ಬರುತ್ತಿದ್ದ ವೇಳೆ ಬೈಕ್ ಸವಾರರು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಸ್ಕೂಟಿಯಲ್ಲಿ ಇದ್ದ ತಾಯಿ ಮಗನ ಪೈಕಿ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೂ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಗಾಯಗೊಂಡವರನ್ನು ತಕ್ಷಣ ಕಾರವಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Karwar: A tragic road accident between a scooter and a Bullet bike claimed one life near the RTO office on National Highway 66 in Karwar.
According to reports, a mother and her son were traveling on the scooter, while two MBBS students were on the bike. The accident occurred when the bike, reportedly coming from the Majali side towards Karwar, collided with the scooter.
The son riding on the scooter died on the spot, while both MBBS students sustained serious injuries.
The injured were immediately shifted to Karwar Government Hospital for treatment. City police visited the scene and conducted an investigation.
ಇದನ್ನೂ ಓದಿ/ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪಗೆ ಹೈಕೋರ್ಟ್‌ನಿಂದ ಬಿಗ್ ಶಾಕ್


