ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ವಿದ್ಯುತ್ ಕೈಕೊಟ್ಟರೆ ಮೊಬೈಲ್ ಸಿಗ್ನಲ್ ಕೂಡ “ಗೋವಿಂದ” ಎನ್ನುವ ಪರಿಸ್ಥಿತಿ ಎದುರಾಗಿದೆ. ಕಳೆದ ಮೂರನಾಲ್ಕು ತಿಂಗಳಿಂದ ಇದೆ ಸಮಸ್ಯೆ ಎದುರಾಗಿದೆ. ಗ್ರಾಮದಲ್ಲಿ ಒಂದೇ ಟವರ್‌ನಡಿ ಕಾರ್ಯನಿರ್ವಹಿಸುತ್ತಿರುವ ಏರ್‌ಟೇಲ್ ಮತ್ತು ಜಿಯೋ ನೆಟ್‌ವರ್ಕ್‌ಗಳು ವಿದ್ಯುತ್ ಕಡಿತವಾದಾಗ ಕ್ಷಣಾರ್ಧದಲ್ಲೇ ಸ್ಥಗಿತವಾಗುತ್ತಿದೆ.
ಜನರೇಟರ್ ಸೌಲಭ್ಯ ಇದ್ದರೂ, ಡೀಸೆಲ್ ಪೂರೈಕೆ ಕೊರತೆ ಹಾಗೂ ಬಂಕ್ ಮಾಲೀಕರಿಗೆ ಲಕ್ಷಾಂತರ ರೂಪಾಯಿ ಬಾಕಿ ಇರುವುದರಿಂದ ಬಂಕ್ ಮಾಲೀಕರು ಈ ಟವರ್‌ಗೆ ಡಿಸೇಲ್ ಪೊರೈಕೆ ಮಾಡುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದ್ದು, ಇದರಿಂದಾಗಿ ವಿದ್ಯುತ್ ಹೋದಾಗ ಜನರೇಟರ್ ಕಾರ್ಯನಿರ್ವಹಿಸು ಸಾಧ್ಯವಾಗದೆ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ ಎನ್ನಲಾಗಿದೆ.
ವಿದ್ಯುತ್ ಹೋಗುವಾಗಲೆಲ್ಲಾ ಮೊಬೈಲ್ ನೆಟ್‌ವರ್ಕ್ ಸಂಪೂರ್ಣ ಸ್ಥಗಿತಗೊಂಡು, ಜನರು ಸಂಪರ್ಕವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ದಿನವಿಡೀ ಸಿಗ್ನಲ್ ಇಲ್ಲದೆ ತುರ್ತು ಕೆಲಸಗಳು, ಬ್ಯಾಂಕಿಂಗ್ ವ್ಯವಹಾರಗಳು, ಮತ್ತು ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗಳೂ ಸಮಸ್ಯೆ ಉಂಟಾಗುತ್ತಿದೆ.
“ಹಣ ಕೊಟ್ಟು ಮೊಬೈಲ್ ಬಳಕೆ ಮಾಡ್ತಿದೀವಿ, ಆದರೆ ಕರೆ ಮಾಡಲು ಕೂಡ ಸಿಗ್ನಲ್ ಸಿಗೋದಿಲ್ಲ. ಕರೆನ್ಸಿಗೆ ಬೆಲೆ ಇಲ್ಲದಂತಾಗಿದೆ,” ಮೊಬೈಲ್ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಟವರ್ ಇದ್ದರೂ ವಿದ್ಯುತ್ ಹೋದಾಗಲೆಲ್ಲಾ ಸಿಗ್ನಲ್ ಕೈಕೊಡುವ ಸ್ಥಿತಿಯಿಂದಾಗಿ, ಡಿಜಿಟಲ್ ಯುಗದ ಸಂಪರ್ಕವನ್ನೇ ಪ್ರಶ್ನೆ ಮಾಡುವಂತಾಗಿದೆ.
Kumta: In Bargi village of Kumta taluk, Uttara Kannada district, mobile signal disappears completely whenever there is a power outage. This problem has been persisting for the past three to four months. Both Airtel and Jio networks, which operate under a single tower in the village, shut down within seconds of a power cut.
Although the tower is equipped with a generator, it has reportedly stopped functioning due to a shortage of diesel supply. According to sources, the telecom companies owe the fuel station owners several lakhs of rupees, and because of these unpaid dues, the station owners have stopped supplying diesel for the tower. As a result, the generator remains idle during power cuts, leading to complete network disruption.
Whenever electricity goes off, the mobile network collapses entirely, leaving the villagers disconnected and helpless. Sometimes, there’s no signal for an entire day, affecting urgent communication, banking transactions, and students’ online classes.
“We pay money to use mobile services, but we can’t even make a call. It feels like our recharge has no value,” complained frustrated users. Despite having a mobile tower, the frequent signal loss during power outages raises serious questions about connectivity in this so-called digital age.
ಇದನ್ನೂ ಓದಿ/ಕಾರವಾರ ಪ್ರವಾಸೋದ್ಯಮ ಇಲಾಖೆಯಲ್ಲ ಹೊಸ ಟೂರಿಸಂ ಯೋಜನೆ.! ವಾಹನವೇ ಮನೆಯ ಕ್ಯಾಬ್


