ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ರಾಜ್ಯದಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳ 2026ರ ಅಂತಿಮ ವೇಳಾಪಟ್ಟಿಯನ್ನು ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ನವೆಂಬರ್ 5ರಂದು ಪ್ರಕಟಿಸಿದೆ.
ಎಸ್ಎಸ್ಎಲ್ಸಿ ಪರೀಕ್ಷೆ-1 ಮಾರ್ಚ್ 18ರಿಂದ ಏಪ್ರಿಲ್ 2ರೊಳಗಾಗಿ ನಡೆಯಲಿದ್ದು, ದ್ವಿತೀಯ ಪಿಯು ಪರೀಕ್ಷೆ-1 ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆಯಲಿದೆ.
ಇದೇ ರೀತಿ, ಎರಡನೇ ಅವಕಾಶದ ಎಸ್ಎಸ್ಎಲ್ಸಿ ಪರೀಕ್ಷೆ-2 ಮೇ 18ರಿಂದ ಮೇ 25ರ ತನಕ, ಪಿಯು ಪರೀಕ್ಷೆ-2 ಏಪ್ರಿಲ್ 25ರಿಂದ ಮೇ 9ರ ವರೆಗೆ ನಡೆಯಲಿದೆ ಎಂದು ಮಂಡಳಿ ತಿಳಿಸಿದೆ.
2026 – ಎಸ್ಎಸ್ಎಲ್ಸಿ ಪರೀಕ್ಷೆ-1 ಸಮಯಪಟ್ಟಿ
ದಿನಾಂಕ-ವಿಷಯ
ಮಾರ್ಚ್ 18 ಪ್ರಥಮ ಭಾಷೆ
ಮಾರ್ಚ್ 23 ವಿಜ್ಞಾನ
ಮಾರ್ಚ್ 25 ದ್ವಿತೀಯ ಭಾಷೆ
ಮಾರ್ಚ್ 28 ಗಣಿತ
ಮಾರ್ಚ್ 30 ತೃತೀಯ ಭಾಷೆ
ಏಪ್ರಿಲ್ 2 ಸಮಾಜ ವಿಜ್ಞಾನ
ಎಸ್ಎಸ್ಎಲ್ಸಿ ಪರೀಕ್ಷೆ-2 (ಮರುಪರೀಕ್ಷೆ) ಸಮಯಪಟ್ಟಿ ದಿನಾಂಕ-ವಿಷಯ
ಮೇ 18 ಪ್ರಥಮ ಭಾಷೆ
ಮೇ 19 ವಿಜ್ಞಾನ
ಮೇ 20 ದ್ವಿತೀಯ ಭಾಷೆ
ಮೇ 21 ಗಣಿತ
ಮೇ 22 ತೃತೀಯ ಭಾಷೆ
ಮೇ 23 ಸಮಾಜ ವಿಜ್ಞಾನ
ಶಾಲೆಗಳು ಮತ್ತು ಕಾಲೇಜುಗಳು ತಮ್ಮ ನೋಟಿಸ್ ಬೋರ್ಡ್ನಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಮುಂಚಿತ ಮಾಹಿತಿ ನೀಡಬೇಕು ಎಂದು ಮಂಡಳಿ ಸೂಚಿಸಿದೆ.
ಇದನ್ನೂ ಓದಿ/ ‘ಜನಗಣಮನ’ ಬ್ರಿಟಿಷರ ಗೀತೆ .? ಸಂಸದ ಕಾಗೇರಿ ವಿವಾಧಾತ್ಮಕ ಹೇಳಿಕೆ




