ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ: ಕಬ್ಬಿಗೆ 3,363 ರೂಪಾಯಿ ದರ ನಿಗಧಿ ಮಾಡುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರು ಇಂದು ಹಳಿಯಾಳ ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಮಳೆಯನ್ನು ಲೆಕ್ಕಿಸದೇ ಪ್ರತಿಭಟನಾಕಾರರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶಿಲ್ದಾರ ಫಿರೋಜ್ ಶಾ ಸೋಮನಕಟ್ಟಿ ಅವರು ರೈತರ ಜೊತೆ ಮಾತನಾಡಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ್ದಾರೆ. ಆದರೆ, “ದರ ನಿಗಧಿ ಅಂತಿಮ ಆಗುವವರೆಗೂ ಕಾರ್ಖಾನೆ ಪ್ರಾರಂಭ ಮಾಡಲು ಬಿಡುವುದಿಲ್ಲ” ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ರೈತರು ತಹಶಿಲ್ದಾರರಿಂದ ತಮ್ಮ ಬೇಡಿಕೆಯನ್ನು ಇಡೇರಿಸುವ ಬಗ್ಗೆ ಲಿಖಿತವಾಗಿ ನೀಡುವಂತೆ ಪಟ್ಟು ಹಿಡಿದಿದ್ದು, “ಲಿಖಿತ ಭರವಸೆ ಸಿಗದಿದ್ದರೆ ಹೆದ್ದಾರಿ ಮೇಲಿಂದ ಕದಲುವುದಿಲ್ಲ” ಎಂದಿದ್ದಾರೆ. ಹೆದ್ದಾರಿ ಬಿಟ್ಟು ಬೇರೆಡೆ ಪ್ರತಿಭಟನೆ ನಡೆಸುವಂತೆ ತಹಶೀಲ್ದಾರ ಮನವಿ ಮಾಡಿದರೂ, ಕಬ್ಬು ಬೆಳೆಗಾರರು ಮಾತ್ರಾ ಸದ್ಯ ಪ್ರತಿಭಟನೆ ಕೈ ಬಿಡುವ ಸಾಧ್ಯತೆ ಕಾಣುತ್ತಿಲ್ಲ. ಪ್ರತಿಭಟನೆಯ ಪರಿಣಾಮವಾಗಿ ಹಳಿಯಾಳ ಹೆದ್ದಾರಿಯಲ್ಲಿ ವಾಹನ ಸಂಚಾರದಲ್ಲಿ ಅಸ್ತವ್ಯಸ್ಥವಾಗಿದೆ. ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

