ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕುಮಟಾ ತಾಲ್ಲೂಕು l0 ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾಲ್ಲೂಕಿನ ಹಿರೇಗುತ್ತಿಯಲ್ಲಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ ಕುಮಟಾ ತಾಲ್ಲೂಕು ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಒಮ್ಮತ ದಿಂದ ನಿರ್ಧರಿಸಲಾಗಿದೆ ಎಂದು ಕಸಾಪ ಕುಮಟಾ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಮೋದ ನಾಯ್ಕ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕುಮಟಾ ತಾಲ್ಲೂಕು ಘಟಕದ ಕಾರ್ಯಾಲಯ ದಲ್ಲಿ ನಡೆದ ಕಸಾಪ ತಾಲ್ಲೂಕು ಘಟಕದ ಕಾರ್ಯಕಾರಿಣಿ ಸಭೆಯಲ್ಲಿ  ನವೆಂಬರ್ 23 ರವಿವಾರದಂದು ವಿಜ್ರಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. ಈ ಸಂಬಂಧ  ಹಿರೇಗುತ್ತಿಯ ಊರ ನಾಗರಿಕರು ಹಾಗೂ ಬ್ರಹ್ಮಜಟಕ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.

ಸಭೆಯಲ್ಲಿ ಮಾತನಾಡಿದ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ. ಆರ್. ನಾಯ್ಕ ಎಲ್ಲರ ಸಹಕಾರ ಪಡೆದು ಆರ್ಥಪೂರ್ಣವಾಗಿ ಸಮ್ಮೇಳನವನ್ನು ಸಂಘಟಿಸ ಬೇಕೆಂದು ಕರೆ ನೀಡಿದರು. ಸಮ್ಮೇಳನವನ್ನು ಅಚ್ಚುಕಟ್ಟಾಗಿ ಸಂಘಟಿಸಲು ಸ್ವಾಗತ ಸಮಿತಿ ಹಾಗೂ ಇತರೇ ಸಮಿತಿಗಳನ್ನು ರಚಿಸಲಾಗುವುದು ಎಂದರು.

ಸಭೆಯಲ್ಲಿ ಗೌರವ ಕಾರ್ಯದರ್ಶಿ ಗಳಾದ ಪ್ರದೀಪ ನಾಯಕ, ನಾಗರಾಜ ಶೆಟ್ಟಿ, ಸುರೇಶ್ ಭಟ್, ಸಂಧ್ಯಾ ಭಟ್, ಲಕ್ಷ್ಮಿ ನಾಯ್ಕ ವಿಜಯ್ ಗುನಗ ,ಯೋಗೀಶ್ ಪಟಗಾರ ಇತರರು ಇದ್ದರು.

ಇದನ್ನೂ ಓದಿ/ಉತ್ತರ ಕನ್ನಡದಲ್ಲಿ ನಕಲಿ ಮದ್ಯದ ಘಾಟು ಜೋರು (ಭಾಗ-2)