ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ತಾಲೂಕಿ‌ನ‌ ಗುಂಡಿಬೈಲ್ ಗ್ರಾಮದಲ್ಲಿ ಯುವತಿ ಓರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಗಾಯತ್ರಿ ಕೇಶವ ಗೌಡ(25) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ಗುರುತಿಸಲಾಗಿದೆ.ಯುವತಿಯ ಆತ್ಮಹತ್ಯೆಗೆ ಇದುವರೆಗೂ ಕಾರಣ ಏನು ಎನ್ನುವುದು ಇದುವರೆಗೂ ತಿಳಿದು ಬಂದಿಲ್ಲ. ಆಕೆ‌ ಬಾವಿಗೆ ಹಾರುವ ಮೊದಲು ಯುವಕನೊಬ್ಬನಿಗೆ ಕರೆ ಮಾಡಿದ್ದಳು ಎನ್ನಲಾಗಿದೆ.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆ ಬಗ್ಗೆ ಕೂಡ ತನಿಖೆ ನಡೆಸುತ್ತಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ/ಆಶ್ರಯದಿಂದ ಅಕ್ಷಯವರೆಗೆ—ಜನರ ಜೀವನ ಬದಲಿಸಿದ ಬಂಗಾರಪ್ಪ ಅವರ ಯೋಜನೆಗಳು ಇಂದಿಗೂ ಜೀವಂತ