ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ : ಉತ್ತರ ಕನ್ನಡ ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ ತಾಲ್ಲೂಕುಗಳ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದ್ದು, ಗೂಡಂಗಡಿ, ಕಿರಾಣಿ ಅಂಗಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿರುವ ಅಕ್ರಮ ಕಲಬೆರಕೆ ಮದ್ಯ ಮಾರಾಟ ತಡೆಯುವಂತೆ ಸ್ಥಳೀಯ ಶಾಸಕರಿಗೆ ಹಾಗೂ ಅಬಕಾರಿ ಇಲಾಖೆಗೆ ಮಹಿಳಾ ಸಂಘಟೆಯಿಂದ ಮನವಿ ಸಲ್ಲಿಸಲಾಗಿದೆ.
ಅಕ್ರಮ ಮದ್ಯ ನಿಲ್ಲಿಸಿ
ಸ್ಥಳೀಯ ಮಹಿಳಾ ಸಂಘಟನೆಗಳು ಶಾಸಕ ಮತ್ತು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿವೆ. ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಯುವಕರು ಮದ್ಯದ ಚಟಕ್ಕೆ: ಕುಟುಂಬಗಳು ಕಂಗಾಲು
ಹಳ್ಳಿಗಳಲ್ಲಿ ಮದ್ಯ ಸುಲಭವಾಗಿ ದೊರೆಯುತ್ತಿರುವುದರಿಂದ ಯುವಕರು ಚಿಕ್ಕ ವಯಸ್ಸಿನಲ್ಲೇ ಚಟಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಮತ್ತು ಕುಟುಂಬ ಜೀವನ ಎರಡೂ ಹಾಳಾಗುತ್ತಿದೆ. ದುಡಿಯುವ ಪುರುಷರ ಗಳಿಕೆಯ ಬಹುಭಾಗ ಮದ್ಯದ ಹಿಂದೆ ಖರ್ಚಾಗುತ್ತಿದ್ದು, ಮನೆಗಳಲ್ಲಿ ಗಲಾಟೆ, ಜಗಳ, ಹಿಂಸೆ ದಿನನಿತ್ಯದ ಉಂಟಾಗುವಂತಾಗಿದೆ..ಮಹಿಳೆಯರು ಸಂಸಾರ ನಡೆಸಲು ಪರದಾಡುವಂತಾಗಿದೆ. ರಸ್ತೆಬದಿಗಳಲ್ಲಿ ಬಿದ್ದಿರುವ ಬಾಟಲಿ ಹಾಗೂ ಪ್ಯಾಕೆಟ್‌ಗಳ ರಾಶಿಗಳನ್ನ ಗಮನಿಸಿದೆ.ಯಾವ ಪ್ರಮಾಣದಲ್ಲಿ ಮದ್ಯ ಮಾರಾಟವಾಗುತ್ತಿದೆ ಎನ್ನುವುದು ಗೊತ್ತಾಗುತ್ತಿದೆ.ಈ ಬಗ್ಗೆ ಸಂಬಂಧಿಸಿದ ಇಲಾಖೆ ಕಠಿಣ ಕ್ರಮ ಜರುಗಿಸುವಂತೆ ಮಹಿಳಾ ಸಂಘಟನೆ ಒತ್ತಾಯಿಸಿದೆ.
ಮಹಿಳೆಯರ ಒಕ್ಕೊರಲಿನ ಬೇಡಿಕೆ
ಗ್ರಾಮೀಣ ಭಾಗದಲ್ಲಿ ಜನರ ನೆಮ್ಮದಿ ಹಾಳುಮಾಡುತ್ತಿರುವ ಈ ಅಕ್ರಮ ಮದ್ಯ ವ್ಯಾಪಾರಕ್ಕೆ ತಕ್ಷಣವೇ ಕಡಿವಾಣ ಹಾಕಬೇಕೆಂದು ಮಹಿಳೆಯರು ಆಗ್ರಹಿಸಿದ್ದಾರೆ. ಅಬಕಾರಿ ಹಾಗೂ ಪೊಲೀಸ್ ಇಲಾಖೆ ಈ ವಿಷಯದಲ್ಲಿ ಗಂಭೀರವಾಗಿ ಕ್ರಮ ಕೈಗೊಳ್ಳಬೇಕೆಂಬುದು ಮಹಿಳಾ ಸಂಘಟನೆ ಒತ್ತಾಯವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಮತ್ತೆ ಅಕ್ರಮ ಮದ್ಯದ ಸದ್ದು ಎನ್ನುವ ಶಿರ್ಷಿಕೆ ಅಡಿಯಲ್ಲಿ ಇಂದು ಸುದ್ದಿ ಬಿಂದು ಕೂಡ ಸಮಗ್ರ ವರದಿ ಪ್ರಕಟಿಸಿರುವುದನ್ನ ಕೂಡ ಸ್ಮರಿಸಬಹುದಾಗಿದೆ. ಅಕ್ರಮ,ಕಲಬೆರಕೆ ಮಧ್ಯದ ಕುರಿಯಾಗಿ ಸುದ್ದಿ ಬಿಂದು ನಿರಂತರ ವರದಿಗೆ ಮುಂದಾಗಿದೆ..
ಇದನ್ನೂ ಓದಿ/ ಉತ್ತರ ಕನ್ನಡದಲ್ಲಿ ಮತ್ತೆ ಅಕ್ರಮ ಸರಾಯಿ ಸದ್ದು ಕಲಬೆರಕೆ ಮಧ್ಯದಿಂದ ಅನೇಕರ ಸಾವು..! (ಭಾಗ-1)

