ಸುದ್ದಿಬಿಂದು ಬ್ಯೂರೋ‌ ವರದಿ
ಕುಮಟಾ : ವಯೋಸಹಜ ಕಾಯಿಲೆಗೆ ಒಳಗಾಗಿದ್ದ PWD ನಿವೃತ್ತ ಅಧಿಕಾರಿ, ಹಿರಿಯ ರಾಜಕಾರಣಿ ನೇರನುಡಿಯ ವ್ಯಕ್ತಿತ್ವ ಹೊಂದಿದ್ದ ಅಳ್ವೇಕೋಡಿಯ ಜೈಯಂತ ಪಟಗಾರ ಅವರು ಇಂದು ತಮ್ಮ ನಿವಾಸದಲ್ಲಿ  ವಿಧಿವಶರಾಗಿದ್ದಾರೆ.

ಮೃತರಿಗೆ 94 ವಯಸ್ಸಾಗಿದ್ದು, ಇವರು ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಗೆ ಒಳಗಾಗಿದ್ದರು. PWD ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಅವರು ತಮ್ಮ ನಿವೃತ್ತಿ ಬಳಿಕ ಗ್ರಾಮ ಒಕ್ಕಲು ಸಮಾಜದ ಜಿಲ್ಲಾಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು, ಮಾಜಿ ಪ್ರಧಾನಿ ದೇವೆಗೌಡ ಅವರ ಆಪ್ತರಾಗಿದ್ದ ಇವರು ಜೆಡಿಎಸ್‌ನಲ್ಲಿ ಕೆಲ ವರ್ಷಗಳ ಕಾಲ ಜೆಡಿಎಸ್‌‌ನ ರಾಜ್ಯ‌ ಕಮಿಟಿಯಲ್ಲಿ ವಿವಿಧ ಹುದ್ದೆಗಳನ್ನ ನಿರ್ವಹಿಸಿ ಜಿಲ್ಲಾದ್ಯಂತ ಪಕ್ಷ ಸಂಘಟಿಸಿದರು.

ಜೆಡಿಎಸ್ ಸೇರ್ಪಡೆಗೊಳ್ಳುವ ಮೊದಲು ಅವರು ಬಿಜೆಪಿಯಲ್ಲಿದ್ದರು, ನಂತರ ಜೆಡಿಎಸ್ ಸೇರ್ಪಡೆಗೊಂಡ ಜೈಯಂತ ಪಟಗಾರ ಅವರು ಕೊನೆ ತನಕ ಜೆಡಿಎಸ್‌ನಲ್ಲಿಯೇ ಮುಂದುವರೆದಿದ್ದರು. ಹಿಂದೂಳಿದ ವರ್ಗದ ಮುಖಂಡರಾಗಿದ್ದ ಇವರು ಬಡವರ ಪರ ಅಪಾರ ಕಾಳಜಿ ಹೊಂದಿದ್ದರು.‌ಮೃತರು ಇಬ್ಬರೂ ಪುತ್ರರು ಹಾಗೂ ಇಬ್ಬರೂ ಪುತ್ರಿಯರು ಸೇರಿದಂತೆ ಅಪಾರ‌ ಬಂದು ಬಳಗವನ್ನ ಅಗಲಿದ್ದಾರೆ. ಅಗಲಿದ ಗಣ್ಯರಿಗೆ ರಾಜಕೀಯ ಮುಖಂಡರು ಸೇರಿದಂತೆ ಅನೇಕರು ಸಂತಾಪ‌ ಸೂಚಿಸಿದ್ದಾರೆ. ನಾಳೆ ಬೆಳಿಗ್ಗೆ 8-30ಕ್ಕೆ ಮೃತರ ಅಂತ್ಯಕ್ರೀಯೆ ಅಳ್ವೆಕೋಡಿಯಲ್ಲಿ ನಡೆಯಲಿದೆ..

ಇದನ್ನೂ ಓದಿ/ದೀಪಾವಳಿ ಹಬ್ಬಕ್ಕೆ ಅಂದರ್ ಬಾಹರ್ ಆಟಕ್ಕೆ ಅನುಮತಿ ಕೊಡಿ..!