ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ತಾಲೂಕಿನ ಬೇಲೇಕೇರಿ ಬಂದರಿನಲ್ಲಿ ಲಂಗರು ಹಾಕಲಾಗಿದ್ದ “ಶ್ರೀ ಶಾರದಾಂಬ” ಹೆಸರಿನ ಪರ್ಸಿನ್ ಮೀನುಗಾರಿಕಾ ಬೋಟ್ ಗುರುವಾರ ಬೆಳಗಿನ ಜಾವ ಅಲೆಗಳ ತೀವ್ರತೆಗೆ ಮುಳುಗಡೆಯಾಗಿರುವ ಘಟನೆ ಸಂಭವಿಸಿದೆ.
ಮೀನುಗಾರ ಸರಸ್ವತಿ ಅಶೋಕ ಬಾನಾವಳಿಕರ ಅವರ ಸ್ವಾಧೀನದಲ್ಲಿದ್ದ ಈ ಬೋಟ್ ಸಮುದ್ರದ ಅಲೆಗಳ ಅಬ್ಬರಕ್ಕೆ ನಲುಗಿ, ಒಳಗೆ ನೀರು ತುಂಬಿಕೊಂಡು ಮುಳುಗಡೆಯಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ. ಬೋಟ್‌ನ ಎಂಜಿನ್, ಬಲೆಗಳು ಹಾಗೂ ಇತರ ಉಪಕರಣಗಳು ಮುಳುಗಡೆಯಾಗಿದೆ.
ಈ ಬಗ್ಗೆ ಬೇಲೇಕೇರಿ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದು “ಬಂದರಿನಲ್ಲಿ ಬ್ರೇಕ್‌ವಾಟರ್ ಸೌಲಭ್ಯ ಇಲ್ಲದ ಕಾರಣ ಇಂತಹ ಘಟನೆಗಳು ಆಗಾಗ ನಡೆಯುತ್ತಿವೆ. ಭಾರೀ ಗಾತ್ರದ ಅಲೆಗಳಿಂದ ಬಂದರಿನಲ್ಲಿ ನಿಲ್ಲಿಸಿದ ಬೋಟ್‌ಗಳಿಗೂ ಅಪಾಯ ಉಂಟಾಗುತ್ತಿದೆ. ಹೀಗಾಗಿ ತಕ್ಷಣ ಶಾಶ್ವತ ಬ್ರೇಕ್‌ವಾಟರ್ ನಿರ್ಮಾಣ ಮಾಡುವಂತೆ ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕುಮಟಾ ಪುರಸಭೆ ಮುಖ್ಯಾಧಿಕಾರಿ ಹೆಸರು ಬರೆದಿಟ್ಟು ನಾಪತ್ತೆಯಾಗಿದ ಸಿಬ್ಬಂದಿ ಪತ್ತೆ