ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕಾರವಾರ ಮೆಡಿಕಲ್ ಕಾಲೇಜು (ಕ್ರಿಮ್ಸ್) ಮಾಜಿ ನಿರ್ದೇಶಕ ಡಾ.ಗಜಾನನ ನಾಯಕ್ ಅವರ ನಿವೃತ್ತಿ ವೇತನ ಸೌಲಭ್ಯದ ಕುರಿತಾಗಿ ಸೆಪ್ಟೆಬಂರ್ 9-2025ರಂದು ಕಾರವಾರ ಕ್ರಿಮ್ಸ್ ನಿವೃತ್ತ ನಿರ್ದೇಶಕ ಗಜಾನನ ನಾಯಕ ವಿರುದ್ಧ ಕ್ರಮಕ್ಕೆ ಸೂಚನೆ ಶಿರ್ಷಿಕೆಯಡಿಯಲ್ಲಿ ಸುದ್ದಿ ಪ್ರಕಣವಾಗಿತ್ತು. ಆದರೆ ಗಜಾನನ ನಾಯಕ ಅವರಿಗೆ ನೀಡಿದ ನೋಟಿಸ್‌ನಲ್ಲಿ ಅವರ ವೇತನದ ಬಗ್ಗೆ ಯಾವುದೇ ಆದೇಶವಾಗಿಲ್ಲ.ತಪ್ಪು ಮಾಹಿತಿ ಪ್ರಕಟವಾಗಿರುವುದಕ್ಕೆ ವಿಷಾಧಿಸುತ್ತೇವೆ..

ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು 2025ರ ಸೆಪ್ಟೆಂಬರ್ 3ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಕಾರವಾರ ಕ್ರಿಮ್ಸ್‌ನಲ್ಲಿ ಹೌಸ್ ಡಾಕ್ಟರ್ ಡಾ. ಸಂದೀಪ್ ಎನ್. ನೀಡಿದ್ದ ದೂರು ವಿಚಾರದಲ್ಲಿ ಶಿಸ್ತಿನ ಕ್ರಮ ಕೈಗೊಂಡು ಏಳು ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಮಾತ್ರ ಸೂಚಿಸಿದೆ…

ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು 2025ರ ಜೂನ್ 20ರಂದು ಮೊದಲ ಪತ್ರ ಕಳುಹಿಸಿದ್ದರೂ, ವರದಿ ಲಭ್ಯವಾಗದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 3ರಂದು ಮತ್ತೊಮ್ಮೆ ಸ್ಮರಣ ಪತ್ರ ಕಳುಹಿಸಿತು. ಆದರೆ ನಿವೃತ್ತಿ ವೇತನ ಕುರಿತು ಆದೇಶ ಪತ್ರಿಯಲ್ಲಿ ಉಲ್ಲೇಖವಾಗಿಲ್ಲ. ಎಂಬುದು ದೃಢವಾಗಿದೆ…

ಇದನ್ನೂ ಓದಿ:ಸಮೀಕ್ಷೆಯನ್ನು ಮುಂದೂಡುವುದಿಲ್ಲ : : CM ಸಿದ್ದರಾಮಯ್ಯ