ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ ಪಟ್ಟಣದ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಭಾರೀ ಕಳ್ಳತನ ನಡೆದಿದೆ. ದೇವಾಲಯದ ಬಾಗಿಲು ಹಾಗೂ ಚೌಕಟ್ಟಿಗೆ ಅಳವಡಿಸಿದ್ದ ಬೆಳ್ಳಿ ಕವಚಗಳನ್ನು ಕಳ್ಳರು ಎಗರಿಸಿರುವ ಘಟನೆ ನಡೆದಿದೆ..
ಕಳ್ಳತನವಾಗಿರುವ ಮೌಲ್ಯ ಸುಮಾರು 5 ರಿಂದ 6 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ. ಹೊಸ ಬಸ್ ನಿಲ್ದಾಣ ಮತ್ತು ಹಳಿಯಾಳ ಪೊಲೀಸ್ ಠಾಣೆಯಿಂದ ಅತಿ ಸಮೀಪದಲ್ಲೇ ದೇವಸ್ಥಾನವಿದ್ದು, ಹೆದ್ದಾರಿಗೆ ಹೊಂದಿಕೊಂಡಿಧ. ಇಂತಹ ಪ್ರಮುಖ ಸ್ಥಳದಲ್ಲೇ ಕಳ್ಳತನ ನಡೆದಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಹಳಿಯಾಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ.
, ಓದಿ: ಸರ್ಕಾರದ ಓಲೈಕೆ ರಾಜಕಾರಣವೇ ಕಲ್ಲು ತೂರಾಟಕ್ಕೆ ಕಾರಣ : ರೂಪಾಲಿ ನಾಯ್ಕ ಆರೋಪ