ಸುದ್ದಿಬಿಂದು ಬ್ಯೂರೋ ವರದಿ
ಮಂಗಳೂರು: ಸೌಜನ್ಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದ್ದು. ಸೌಜನ್ಯ ತಾಯಿ ಕುಸುಮಾವತಿ ಅವರು ಇದೀಗ ಮಾಸ್ಕಮ್ಯಾನ್ (ಚಿನ್ನಯ್ಯ)ನ ವಿರುದ್ಧ ಎಸ್ಐಟಿಗೆ ದೂರು ದಾಖಲಿಸಿದ್ದಾರೆ.

ಕುಸುಮಾವತಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್ಪಿ) ನೀಡಿರುವ ದೂರಿನಲ್ಲಿ, ಚಿನ್ನಯ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಯಾಕೆಂದರೆ, ಚಿನ್ನಯ್ಯ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದರಲ್ಲಿ ನೀಡಿದ ಹೇಳಿಕೆಯಲ್ಲಿ, “ನಾನು ಸೌಜನ್ಯ ಶವ ನೋಡಿದ್ದೇನೆ, ನಾಲ್ವರು ಸೇರಿ ಶವ ತೆಗೆದುಕೊಂಡು ಹೋಗುತ್ತಿರುವುದನ್ನು ಕಣ್ಣಾರೆ ಕಂಡಿದ್ದೇನೆ” ಎಂದು ಬಹಿರಂಗಪಡಿಸಿದ್ದರು.

ಈ ಹೇಳಿಕೆ ಹಿನ್ನೆಲೆಯಲ್ಲಿ, ಚಿನ್ನಯ್ಯ ವಿಚಾರಣೆ ನಡೆಸುವಂತೆ ಹಾಗೂ ಅವರ ಹೇಳಿಕೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಗಂಭೀರವಾಗಿ ಪರಿಗಣಿಸಬೇಕೆಂದು ಸೌಜನ್ಯ ತಾಯಿ ತಮ್ಮ ದೂರಿನಲ್ಲಿ ಸ್ಪಷ್ಟವಾಗಿ ಒತ್ತಾಯಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ತನಿಖೆ ಮುಂದುವರಿದಿದ್ದು, ಹೊಸ ದೂರು ತನಿಖೆಗೆ ಮತ್ತಷ್ಟು ತಿರುವು ನೀಡುವ ಸಾಧ್ಯತೆ ವ್ಯಕ್ತವಾಗಿದೆ.

ಇದನ್ನೂ ಓದಿ : ಅನನ್ಯಾ ನನ್ನ ಮಗಳಲ್ಲ : ಎಸ್‌ಐಟಿ ಎದುರು ಕಣ್ಣೀರು ಹಾಕಿದ ಸುಜಾತಾ ಭಟ್