ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಹಾಲಮಡ್ಡಿ ಸೇತುವೆ ಕೆಳಗಡೆ ಭಯ ಹುಟ್ಟಿಸುವಂತಹ ದೃಶ್ಯ ಸೆರೆ ಸಿಕ್ಕಿದೆ. ಹಾಲಮಡ್ಡಿ ಸೇತುವೆ ಬಳಿಯಲ್ಲಿ ಐದಾರು ಮೊಸಳೆಗಳು ಸೇರಿ ಜಾನುವಾರುಗಳ ಮೇಲೆ ದಾಳಿ ನಡೆಸಿ ತಿಂದುಬಿಡುತ್ತಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಈ ದೃಶ್ಯವನ್ನು ಕಣ್ಣಾರೆ ಕಂಡ ಗ್ರಾಮಸ್ಥರು ತಕ್ಷಣವೇ ತಮ್ಮ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ದಾಂಡೇಲಿ ಪ್ರದೇಶದಲ್ಲಿ ಮೊಸಳೆಗಳ ಭೀತಿ ಮತ್ತೆ ಎದುರಾಗಿದೆ.
ಇದನ್ನೂ ಓದಿ:ಅಪಘಾತ ನಿಯಂತ್ರಣಕ್ಕೆ ಕುಮಟಾದಲ್ಲಿ ಬಿಗ್ ಆಕ್ಷನ್ : ನಿಯಮ ಮೀರಿ ವಾಹನ ಓಡಿಸಿದ್ರೆ ಕಾನೂನು ಕ್ರಮ