ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ನಗರದ ಬೈತ್ಕೋಲ ಬಡಾವಣೆಯಲ್ಲಿ ಕುಡಿದ ಮತ್ತಿನಲ್ಲಿ ಮಾವನೆ ತನ್ನ ಅಕ್ಕನ ಮಗನ ಕೊಲೆ ಮಾಡಿರುವ ಘಟನೆ ನಡೆದಿದೆ.

ಚಾಸ್ಟನ್ (35) ಎಂಬಾತನೆ ಮೃತ ವ್ಯಕ್ತಿಯಾಗಿದ್ದಾನೆಂದು ಗುರುತಿಸಲಾಗಿದೆ, ಚೋರನ್ ಎಂಬಾತನೆ ಅಕ್ಕನ ಮನಗ‌ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ವೈಯಕ್ತಿಕ ಕಾರಣದಿಂದ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದ ಪರಿಣಾಮವಾಗಿ, ಆಕ್ರೋಶಗೊಂಡ ಆರೋಪಿ ಚೋರನ್ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಚಾಸ್ಟನ್‌ನ್ನು ಸ್ಥಳದಲ್ಲೇ ಕೊಂದಿದ್ದಾನೆ.

ಘಟನೆ ಬಳಿಕ ಆರೋಪಿ ಚೋರನ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ:ಶಾಸಕ ಸತೀಶ್ ಸೈಲ್ ಮನೆ ಮೇಲೆ ಇಡಿ ದಾಳಿ : ಪ್ರಭಾವಿ ನಾಯಕನ ಬಗ್ಗೆ ಚರ್ಚೆ..!