ಪ್ರಮುಖ ಸುದ್ದಿ
ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಶಾಸಕ ಸತೀಶ ಸೈಲ್ ಅವರ ಸದಾಶಿವಘಡ ನಿವಾಸದ ಮೇಲೆ ಇಂದು ಬೆಳ್ಳಂಬೆಳ್ಳಿಗೆ 6ರಿಂದ 7 ED ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.
ಬೆಂಗಳೂರಿನಿಂದ ಬಂದ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಮನೆ ಎದುರು ಸಿಐಎಸ್ಎಫ್ ಸಿಬ್ಬಂದಿಗಳಿಂದ ಕಾವಲು ಹಾಕಲಾಗಿದೆ. ಶಾಸಕ ಸತೀಶ ಸೈಲ್ ಅವರು ಮನೆಯಲ್ಲಿ ಇಲ್ಲದಿರುವಾಗಲೇ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸುಮಾರುವ ಎರಡರಿಂದ ಮೂರು ವಾಹನಗಳಲ್ಲಿ ಬಂದ ED ಅಧಿಕಾರಿಗಳು ಹಾಗೂ ಇಬ್ಬರೂ ಅರೆಮಿಲಿಟರಿ ಸಿಬ್ಬಂದಿಗಳು ಶಾಸಕ ಸೈಲ್ ಮೇಲೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅಧಿವೇಶನದಲ್ಲಿ ಶಾಸಕ ದಿನಕರ ಶೆಟ್ಟಿ ವಿರೋಧ