ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ತಾಲೂಕಿನ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ದಂಧೆಕೋರರಿಗೆ ಸಿಂಹಸ್ಪಪ್ನವಾಗಿದ್ದ ಪಿಎಸ್ ಐ ಮಹಾಂತೇಶ ವಾಲ್ಮೀಕಿ ಅವರನ್ನ ಎತ್ತಂಗಡಿ ಮಾಡಲು ಕನ್ನಡ ಪರ ಸಂಘನೆ ಅಧ್ಯಕ್ಷ ಅಕ್ರಮ ದಂಧೆಕೋರರ ಪರ ನಿಂತು Psi ಅವರನ್ನ ಎತ್ತಂಗಡಿ ಮಾಡಲು ಸಂಚು ಮಾಡಿರುವುದು ಇದೀಗ ಬಹಿರಂಗವಾಗಿದೆ.
ಪಿಎಸ್ಐ ಮಹಾಂತೇಶ ಅವರು ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಅನೇಕ ಪ್ರಕರಣಗಳನ್ನು ಬೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಅಕ್ರಮ ಚಟುವಟಿಕೆಗಳನ್ನ ಬೇಧಿಸಿದ್ದಾರೆ. ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುತ್ತಿದ್ದಾರೆ. ಆದರೆ ಇತ್ತಿಚೇಗೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡ ಕೆಲವರು ಪಿಎಸ್ ಐ ವಿರುದ್ದ ಸುಳ್ಳು ಆರೋಪ ಮಾಡುವ ಮೂಲಕ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲು ಸಂಚು ರೂಪಿಸುತ್ತಿದ್ದಾರೆ.
ಚಿತ್ತಾಕುಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಸವಿರುವ ವ್ಯಕ್ತಿಯೋರ್ವರು ವಿಡಿಯೋ ಚಿತ್ರಣ ಮಾಡಿ ಪಿಎಸ್ ಐ ತನ್ನ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ಕಾರಣ ಇಲ್ಲದೇ ತನ್ನ ಕಾರ್ ಠಾಣೆಗೆ ತಂದು ಸತಾಯಿಸಿದ್ದಾರೆ ಎಂಬಿತ್ಯಾದಿ ಆರೋಪ ಮಾಡಿ ವಿಡಿಯೋ ವೈರಲ್ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇನ್ನೊಂದು ವಿಡಿಯೋ ವಾಟ್ಸ್ಅಪ್ ಗ್ರುಪ್ ನಲ್ಲಿ ಹರಿದಾಡುತ್ತಿದೆ.
ಈ ಮೊದಲು ಪಿಎಸ್ಐ ಮಹಾಂತೇಶ ವಾಲ್ಮೀಕಿ ವಿರುದ್ದ ಆರೋಪ ಮಾಡಿದ ವ್ಯಕ್ತಿಯೇ ಈಗ ಅಸಲಿ ಘಟನೆನ್ನ ವಿಡಿಯೋ ಮಾಡಿ ಘಟನೆ ಸತ್ಯವನ್ನ ಬಿಚ್ಚಿಟ್ಟಿದ್ದಾರೆ. ತನಗೆ ಸಾರಾಯಿ ಕುಡಿಸಿ ಬೆದರಿಕೆ ಹಾಕಿ ಪಿಎಸ್ಐ ಮಹಾಂತೇಶ ಅವರ ವಿರುದ್ದ ಮಾತನಾಡಲು ಹೇಳಿ ವಿಡಿಯೋ ಮಾಡಿಸಿ ಅವರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ತನಗೆ ಪಿಎಸ್ಐ ಯಾವುದೇ ರೀತಿಯಲ್ಲಿ ಅನ್ಯಾಯ ಮಾಡಿಲ್ಲ. ತಾನು ಮದ್ಯಪಾನ ಮಾಡಿದ್ದಕ್ಕೆ ತನ್ನಿಂದ ಕಾರ್ ಚಾವಿ ತೆಗೆದುಕೊಂಡು ನಾಳೆ ಬೆಳಗ್ಗೆ ಠಾಣೆಗೆ ಬಂದು ಕಾರ್ ತೆಗೆದುಕೊಂಡು ಹೋಗುವಂತೆ ಬುದ್ದಿವಾದ ಹೇಳಿದ್ದರು ಹೊರತು ಹಲ್ಲೆ ಮಾಡಲಿಲ್ಲ. ಯಾವುದೇ ರೀತಿಯಲ್ಲಿಯೂ ನಿಂದಿಸಿಲ್ಲ.
ಅಕ್ರಮ ಚಟುವಟಿಕೆ ಮಾಡುವ ತನ್ನ ಮಿತ್ರ ಸಮೀರ ಮತ್ತು ಕನ್ನಡ ಪರ ಸಂಘಟನೆಯಲ್ಲಿರುವುದಾಗಿ ಹೇಳುವ ಆಕ್ಷಯ ನನಗೆ ಬಲವಂತವಾಗಿ ಪಿಎಸ್ಐ ವಿರುದ್ದ ಆರೋಪ ಮಾಡಲು ಹೇಳಿದ್ದರು. ಆವಾಗ ತಾನೂ ಸಹ ಸಾರಾಯಿ ನಶೆಯಲ್ಲಿದ್ದೆ ಎಂದು ಈ ಮೊದಲು ಆರೋಪ ಮಾಡಿರುವ ವ್ಯಕ್ತಿ ಇನ್ನೊಂದು ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಅಕ್ರಮ ಚಟುವಟಿಕೆ ಅಥವಾ ಅಪರಾಧಿಕ ಪ್ರಕರಣ ನಿಯಂತ್ರಿಸುವುದಕ್ಕೆ ಪ್ರಯತ್ನ ಮಾಡುತ್ತಿರುವಾಗ ಅವರ ವಿರುದ್ದ ಸುಳ್ಳು ಆರೋಪಗಳು ಬರುವುದು. ಅಥವಾ ಅವರ ಆತ್ಮವಿಶ್ವಾಸ ಕುಗ್ಗಿಸಲು ಪ್ರಯತ್ನ ಮಾಡುವುದು ಸಾಮಾನ್ಯವಾಗಿದೆ. ಆದರೆ ಮೊದಲು ಆರೋಪ ಮಾಡಿ ನಂತರ ತಾನು ಮಾಡಿರುವ ಆರೋಪ ಸುಳ್ಳಾಗಿದ್ದು ತನಗೆ ಬೆದರಿಕೆ ಹಾಕಿ ಸಾರಾಯಿ ಕುಡಿಸಿ ಆರೋಪ ಮಾಡಲು ಹೇಳಿದ್ದಾರೆಂದು ಹೇಳುವ ಮೂಲಕ ಕ್ಷಮೆಯಾಚಿಸಿರುವುದು ಅಪರೂಪದ ಸಂಗತಿಯಾಗಿದೆ.
ಈ ರೀತಿ ಓರ್ವ ಅಧಿಕಾರಿ ವಿರುದ್ದ ಆರೋಪ ಮಾಡಿ ವಿಡಿಯೋ ವೈರಲ್ ಮಾಡುವ ವ್ಯಕ್ತಿಗಳ ವಿರುದ್ದ ಕ್ರಮ ಆಗಬೇಕು ಹಾಗು ವಿಡಿಯೋ ಮಾಡಲು ಬೆದರಿಕೆ ಹಾಕಿರುವ ಅಕ್ರಮ ದಂದೇಖೋರರ ವಿರುದ್ದ ಪ್ರಕರಣ ದಾಖಲಿಸಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಇದನ್ನೂ ಓದಿ:Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.