ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಉಪ ವಿಭಾಗದ ಸಹಾಯಕ ಆಯುಕ್ತರಾಗಿದ್ದ ಕಲ್ಯಾಣಿ ಕಾಂಳ್ಳೆ ಅವರನ್ನು ವರ್ಗಾವಣೆಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು. ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಧಿಸೂಚನೆ ಜಾರಿಯಾಗಿದೆ.

ಅವರ ಸ್ಥಳಕ್ಕೆ ಐಎಎಸ್ (KN:2023) ಬ್ಯಾಚ್‌ನ ಪಿ. ಶ್ರವಣಕುಮಾರ ಅವರನ್ನು ನೂತನ ಸಹಾಯಕ ಆಯುಕ್ತರಾಗಿಯಾಗಿ ನೇಮಿಸಲಾಗಿದೆ. ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣಾ ಇಲಾಖೆ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ.

ಶ್ರವಣಕುಮಾರ್ ಅವರು ಈಗಿನಿಂದಲೇ ತಮ್ಮ ಹೊಸ ಕರ್ತವ್ಯವನ್ನು ಕೈಗೊಳ್ಳಲಿದ್ದು, ತಾಲೂಕಿನ ಆಡಳಿತಾತ್ಮಕ ಕಾರ್ಯಾಚರಣೆಗೆ ಚುರುಕು ಮುಟ್ಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:MLA Bhimanna Naik/ಅಮೇರಿಕಾದ ಅಂಗಳದಲ್ಲಿ ವೈಜ್ಞಾನಿಕ ಡಿಜಿಟಲ್ ಚರ್ಚೆಯಲ್ಲಿ ಪಾಲ್ಗೊಂಡ ಶಿರಸಿ ಶಾಸಕ ಭೀಮಣ್ಣ ನಾಯ್ಕ