ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಅಮೇರಿಕಾದ (USA) ಬೋಸ್ಟನ್ ನಗರದಲ್ಲಿ ನಡೆದ 50ನೇ ಅಂತರಾಷ್ಟೀಯ ರಾಜ್ಯ ಶಾಸಕಾಂಗಳ ಶೃಂಗಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶಾಸಕ ಭೀಮಣ್ಣ ನಾಯ್ಕ ಪಾಲ್ಗೊಂಡು, ಅನೇಕ ವಿಚಾರಗಳ ಕುರಿತಾಗಿ ಚರ್ಚೆ ನಡೆಸಿದ್ದರು.

ಅಗಸ್ಟ್ 4ರಿಂದ 6ರ ವರೆಗೆ ಅಮೆರಿಕಾದ ವಿವಿಧ ರಾಜ್ಯಗಳಲ್ಲಿ ವೈಜ್ಞಾನಿಕ, ರಾಜಕೀಯ, ಧಾರ್ಮಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿನ ಪ್ರಮುಖ ಶೃಂಗ ಸಮ್ಮೇಳನಗಳು ನಡೆದಿದ್ದು, ಜಾಗತಿಕ ಚಿಂತಕರು, ತಜ್ಞರು ಹಾಗೂ ಕರ್ನಾಟಕದ ಶಾಸಕರು ಪಾಲ್ಗೊಂಡು ಅನೇಕ ನವೋತ್ಪಾದನೆಗಳು ಮತ್ತು ನೀತಿಗಳ ಬಗ್ಗೆ ಚರ್ಚಿಸಿದರು.

ಅಮೆರಿಕದ ಲಾಸ್ ವೆಗಾಸ್‌ನಲ್ಲಿ ನಡೆದ ‘ಬ್ಲ್ಯಾಕ್ ಹ್ಯಾಟ್ ಯುಎಸ್‌ಎ 2025’ ಸೈಬರ್ ಭದ್ರತಾ ಶೃಂಗದಲ್ಲಿ ನೂತನ ತಂತ್ರಜ್ಞಾನಗಳು, ಎಐ ಬೆದರಿಕೆಗಳು ಮತ್ತು ಡಿಜಿಟಲ್ ಭದ್ರತೆಯ ಕುರಿತಾದ ಮುಖ್ಯ ಚರ್ಚೆಗಳು ನಡೆದವು. ಸಿಐಎಸ್‌ಒ ಶೃಂಗದಲ್ಲಿ ವಿಶ್ವದ ಮುಂಚೂಣಿಯ ಭದ್ರತಾ ತಜ್ಞರು ಪಾಲ್ಗೊಂಡಿದ್ದರು.

ಬಾಸ್ಟನ್‌ನಲ್ಲಿ ನಡೆದ ಎನ್‌ಸಿಎಸ್‌ಎಲ್ ಶಾಸಕರ ಶೃಂಗ ಸಭೆಯು ಕರ್ನಾಕದ ಶಾಸಕರನ್ನು ವಿಶೇಷವಾಗಿ ಆಕರ್ಷಿಸಿತು. ಕರ್ನಾಟಕದಿಂದ ಶಿರಸಿ ಶಾಸಕ ಭೀಮಣ್ಣ ನಾಯ್ಕ, ಯುಟಿ ಖಾದರ್, ಬಸವರಾಜ್ ಹೊರಟ್ಟಿ ಸೇರಿದಂತೆ 12ಶಾಸಕರು ಈ ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಶೃಂಗಸಭೆಯಲ್ಲಿ ಡಿಜಿಟಲ್ ಆಡಳಿತ, ಎಐ ಆಧಾರಿತ ನೀತಿ ರೂಪಣೆ ಕುರಿತು ಚರ್ಚಿಸಲಾಯಿತು.

ಇದನ್ನೂ ಓದಿ:ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲೆ ಕೈಗಾ ‘ಕಿಂಗ್ ! ಈವರೆಗೆ 13 ಸಾವಿರ ಕೋಟಿ ಯುನಿಟ್ ವಿದ್ಯುತ್ ಉತ್ಪಾದನೆ