ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದು, ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಸ್ಪಷ್ಟಪಡಿಸಿದೆ. ನಾಳೆ ಶಿಕ್ಷೆಯ ಪ್ರಮಾಣ ಘೋಷಣೆಯಾಗಲಿದೆ.
ಬಿಗ್ ರಿಲೀಫ್ ಸಿಗುವ ನಿರೀಕ್ಷೆಯಲ್ಲಿದ್ದ ಮಾಜಿ ಸಂಸದನಿಗೆ ಈ ತೀರ್ಪು ದೊಡ್ಡ ಆಘಾತವಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು 4 ಕೇಸ್ಗಳು ದಾಖಲಾಗಿದ್ದವು. ಇದರಲ್ಲಿ ಮನೆ ಕೆಲಸದಾಕೆ ನೀಡಿದ ಪ್ರಕರಣದ ತೀರ್ಪು ಮಾತ್ರ ಇಂದು ಪ್ರಕಟವಾಗಿದ್ದು, ಆರೋಪ ಸಾಬೀತಾಗಿದೆ.
ವಾದ-ಪ್ರತಿವಾದದ ವೇಳೆ ಕೋರ್ಟ್ ಎರಡೂ ಪಕ್ಷದ ವಕೀಲರಿಂದ ಸಾಕ್ಷ್ಯಾಧಾರಗಳ ಕುರಿತು ಹಲವು ಸ್ಪಷ್ಟನೆಗಳನ್ನು ಕೇಳಿತ್ತು. ಮೊಬೈಲ್ ಸಾಕ್ಷ್ಯ, ತಾಂತ್ರಿಕ ಸಾಕ್ಷ್ಯಗಳು ಹಾಗೂ ಗೂಗಲ್ ಮ್ಯಾಪ್ ಮಾಹಿತಿಯನ್ನು ಸಾಕ್ಷಿಯಾಗಿ ಪರಿಗಣಿಸಬಹುದೇ? ಎಂಬುದರ ಕುರಿತು ವಿಚಾರಣೆ ನಡೆಸಲಾಗಿತ್ತು. ಸ್ಯಾಮ್ಸಂಗ್ ಜೆ4 ಮೊಬೈಲ್ ಸೀಜ್ ಮಾಡಿರುವ ವಿಷಯದಲ್ಲಿಯೂ ವಿವರಣೆ ಕೇಳಿತ್ತು. ಕೆಲ ಕಾಲ ವಿಚಾರಣೆಯನ್ನು ಮುಂದೂಡಿದ್ದ ಕೋರ್ಟ್ ಇದೀಗ ತೀರ್ಪನ್ನು ಪ್ರಕಟಿಸಿದೆ. ಪ್ರಜ್ವಲ್ ರೇವಣ್ಣ ವಿರುದ್ಧದ ಉಳಿದ 3 ಪ್ರಕರಣಗಳ ವಿಚಾರಣೆ ಮುಂದುವರಿಯಲಿದೆ..
ಇದನ್ನೂ ಓದಿ:Teacher /ಶಿಕ್ಷಕಿ ಶ್ಯಾಮಲಾ ನಾಯಕರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ