ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರಕನ್ನಡ ಜಿಲ್ಲೆಯ ಶಿರೂರು ಗುಡ್ಡಕುಸಿತ ಘಟನೆ ಆಧರಿಸಿ ಮಲಯಾಳಂ ಸಿನಿಮಾ ನಿರ್ಮಾಣದ ಸಿದ್ಧತೆಗಳು ಜೋರಾಗಿವೆ. ಕೇರಳದ ಪ್ರಸಿದ್ಧ ನಿರ್ದೇಶಕರೊಬ್ಬರಿಂದ ಈ ಸಿನಿಮಾ ನಿರ್ಮಾಣವಾಗಲಿದ್ದು, ಚಿತ್ರ ತಂಡ ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಕಾರವಾರ ಶಾಸಕರಾದ ಸತೀಶ ಸೈಲ್ ಅವರೊಂದಿಗೆ ಮಾತುಕತೆ ನಡೆಸಿದೆ.

ಚಿತ್ರದ ಸಂಪೂರ್ಣ ಚಿತ್ರೀಕರಣ ಶಿರೂರು ಭಾಗದಲ್ಲೇ ನಡೆಸಲು ನಿರ್ದೇಶಕರು ನಿರ್ಧರಿಸಿದ್ದು, ಸ್ಥಳೀಯರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಯೋಜನೆಯಲ್ಲಿದ್ದಾರೆ. ಸಿನಿಮಾ ನಿರ್ಮಾಣದ ಕುರಿತಾಗಿ ಮಂಜೇಶ್ವರ ಶಾಸಕ ಎಂ. ಅಶ್ರಫ್ ಮಾಹಿತಿ ನೀಡಿದ್ದು, ಶಿರೂರು ಘಟನೆಯ ಕುರಿತು ಸಿನಿಮಾ ಮೂಲಕ ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಗಮನ ಸೆಳೆಯುವ ಪ್ರಯತ್ನವಾಗಲಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಶಿರೂರು ಗುಡ್ಡ ಕುಸಿತ ಘಟನೆ ಕುರಿತಾಗಿ ತಮ್ಮಿಂದಲೇ ಒಂದು ಪುಸ್ತಕ ಬರೆಯುತ್ತಿರುವುದಾಗಿ ಅವರು ಬಹಿರಂಗಪಡಿಸಿದ್ದು, ಇನ್ನೂ ಮೂರು ತಿಂಗಳಲ್ಲಿ ಪುಸ್ತಕ ಪೂರ್ಣಗೊಳ್ಳಲಿದೆ ಎಂದಿದ್ದಾರೆ.

ಇದನ್ನೂ ಓದಿ:ಧರ್ಮಸ್ಥಳದಲ್ಲಿ ನಿಗೂಢ ಸಾವು : ಶವಗಳ ಹೊರತೆಗೆದುವ ಕಾರ್ಯ ಆರಂಭ