ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 766 (ಇ)ಯಲ್ಲಿ ಭೂಕುಸಿತ ಸಂಭವಿಸಿದೆ. ಕುಮಟಾ ತಾಲೂಕಿನ ದೇವಿಮನೆ ಘಟ್ಟದ ಕ್ಷೇತ್ರಪಾಲೇಶ್ವರ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ರಸ್ತೆಯ ಅಂಚಿನವರೆಗೂ ಭೂಮಿ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ.

ಈ ಕುಸಿತದ ಪರಿಣಾಮವಾಗಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಬಂದ್ ಆಗುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಭೂ ಕುಸಿಕ್ಕೆ‌ ಕಾರಣವಾಗಿದೆ. 2024ರ ಡಿಸೆಂಬರ್ 1ರಂದು ಇದೇ ಭಾಗದಲ್ಲಿ ಭೂಮಿ ಮೂರು ಸೆಕೆಂಡ್‌ಗಳಷ್ಟು ಕಂಪಿಸಿದ್ದ ಘಟನೆ ನಡೆದಿದ್ದು, ಆಗಲೇ ಭೂ ಕುಸಿತವಾಗುವ ಆತಂಕ ವ್ಯಕ್ತವಾಗಿತ್ತು.

ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದ (GSI) ಭೂ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ, ಮಣ್ಣಿನ ಪದರ ಸಡಿಲವಾಗಿರುವುದಾಗಿ ತಿಳಿಸಿದ್ದರು.ದೇವಿಮನೆ ಘಟ್ಟ ಭಾಗದಲ್ಲಿ ಕಳೆದ ಒಂದು ತಿಂಗಳಿಂದ ನಿರಂತರವಾಗಿ ಭೂಮಿ ಕುಸಿಯುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ :ಬೈರುಂಬೆಯಲ್ಲಿನ ವೈದ್ಯರ ಹೋಂ ಸ್ಟೇ ಅಕ್ರಮ : ಪ್ರವಾಸೋದ್ಯಮ ಇಲಾಖೆಯಿಂದ ಸಿಕ್ಕಿಲ್ಲ ಅನುಮತಿ