ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ವಿವೇಕ, ವೈರಾಗ್ಯ, ಇಂದ್ರೀಯ ನಿಗ್ರಹದ ಮೂಲಕ ಜ್ಞಾನ-ವೈರಾಗ್ಯವನ್ನು ಮೈಗೂಢಿಸಿಕೊಂಡು ಬದುಕಿದಾಗ ಬದುಕು ಹಗುರವಾಗುತ್ತದೆ. ಎಲ್ಲಾ ಭಗವಂತ ಕೊಟ್ಟಿದ್ದೆಂಬ ಪರಿಕಲ್ಪನೆಯಲ್ಲಿ ಅಧಿಕಾರ, ಸಂಪತ್ತನ್ನು ಮನದಾಳದಲ್ಲಿ ತ್ಯೆಜಿಸಿ ಬದುಕಬೇಕೆಂದು ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಕರೆ ನೀಡಿದರು.
ಕುಮಟಾ ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಚಾತುರ್ಮಾಸ್ಯ ವ್ರತಾಚರಣೆಯ ೧೭ನೇ ದಿನದ ಕಾರ್ಯಕ್ರಮದಲ್ಲಿ ಹೊನ್ನಾವರದ ಉಪ್ಪೋಣಿ ಗ್ರಾಪಂ ಕೂಟದಿಂದ ಸಲ್ಲಿಕೆಯಾದ ಗುರು ಸೇವೆಯನ್ನು ಸ್ವೀಕರಿಸಿ, ಶ್ರೀಗಳು ಆಶೀರ್ವಚನ ನೀಡಿದರು. ಭಗವಂತನ ದರ್ಶನ ಪ್ರಾಪ್ತಿಗಾಗಿ ಜ್ಞಾನ, ಭಕ್ತಿ ವೈರಾಗ್ಯ ಬೇಕು. ಭಕ್ತಿ ತಾಯಿಯಾದರೆ, ಜ್ಞಾನ ಮತ್ತು ವೈರಾಗ್ಯ ಮಕ್ಕಳಿದ್ದಂತೆ. ವಿವೇಕ ಮತ್ತು ಇಂದ್ರೀಯಗಳ ನಿಗ್ರಹವೂ ಬೇಕು. ಜಗತ್ತಿನಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ಅರಿತುಕೊಂಡು ಇಂದ್ರೀಯವನ್ನು ನಿಗ್ರಹಿಸಿ ಬದುಕಬೇಕು. ಜ್ಞಾನ ತಿಳುವಳಿಕೆಯನ್ನು ನೀಡಿದರೆ, ವೈರಾಗ್ಯ ಈ ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವು ನಾಶವಾಗುತ್ತದೆ. ಪರಮಾತ್ಮ ಒಬ್ಬನೇ ಸತ್ಯ. ನಿರಾಕಾರ. ಎಲ್ಲವೂ ಅವನೇ ಎಂಬ ಭಾವನೆ ಬರಬೇಕು. ಜ್ಞಾನಕ್ಕಾಗಿ ಶಾಸ್ತç, ಪುರಾಣಗಳನ್ನು ಅಧ್ಯಯನ ಮಾಡಬೇಕು ಎಂದ ಶ್ರೀಗಳು ಭಕ್ತ ದಾಮೋದಿ ಮತ್ತು ಬೀದರಿನಲ್ಲಿದ್ದ ಬಾದಷಾ ರಾಜನ ಕಥೆಯನ್ನು ಮನೋಜ್ಞವಾಗಿ ವಿವರಿಸುವ ಮೂಲಕ ಭಕ್ತಿಯ ಮಹಿಮೆಯನ್ನು ಸಾರಿದರು. ಭಗವಂತನಲ್ಲಿ ನಮ್ಮನ್ನು ಅರ್ಪಿಸಿಕೊಂಡಾಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಆ ನಿಟ್ಟಿನಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮ ಜನರಲ್ಲಿ ಭಕ್ತಿಭಾವ ಮೂಡಿಸಲು ಪ್ರೆರೇಪಣೆ ನೀಡುತ್ತದೆ ಎಂದು ಶ್ರೀಗಳು ನುಡಿದರು.
ಚಾತುರ್ಮಾಸ್ಯದ ೧೭ನೇ ದಿನದ ಕಾರ್ಯಕ್ರಮದಲ್ಲಿ ಉಪ್ಪೋಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲಗದ್ದೆ, ಉಪ್ಪೋಣಿ, ಯಲಕೊಟ್ಟಿಗೆ, ಮಹಿಮೆ ಹಾಗೂ ಆನೆಹೊಂಡ ಗ್ರಾಮದ ಸಮಸ್ತ ನಾಮಧಾರಿ ಸಮಾಜ ಬಾಂಧವರು ಗುರುಪಾದುಕಾ ಪೂಜೆ ಸಲ್ಲಿಸಿದರು. ಗಿರಿಧರ್ ಹೆಚ್ ನಾಯ್ಕ್ ಕೊಪ್ಪಳಕರ ವಾಡಿ, ಕುಮಟಾ ಅರ್ಬನ್ ಬ್ಯಾಂಕ್ ಸಿಬ್ಬಂದಿವರ್ಗ, ಸುರೇಶ್ ವೆಂಕ್ಟ ನಾಯ್ಕ್ ಹಾಗೂ ಕುಟುಂಬದವರು ಹೆರವಟ್ಟ, ಗಜಾನನ ವೆಂಕ್ಟ ನಾಯ್ಕ್ ಕೋನಳ್ಳಿ, ಶ್ರೀ ಗುರುರಾಜ ಶೆಟ್ಟಿ ವಿಧಾತ್ರಿ ಅಕಾಡೆಮಿ ಕೊಂಕಣ ಎಜುಕೇಶನ್ ಟ್ರಸ್ಟ್ ಇವರು ವೈಯಕ್ತಿಕ ಗುರುಪಾದುಕಾ ಪೂಜೆ ಸಲ್ಲಿಸಿದರು. ಮಂಜುನಾಥ.ಎಲ್. ನಾಯ್ಕ್ ಉದ್ದಿಮೆದಾರರು ಕುಮಟಾ ಹಾಗೂ ಆನಂದ್ ಈರಾ ನಾಯ್ಕ್ ಅಧ್ಯಕ್ಷರು ವಿನಾಯಕ ಸೌಹರ್ದ ಕ್ರೆಡಿಟ್ ಕೊ,ಆಪ್, ಸೊಸೈಟಿ ಸಿದ್ದಾಪುರ ಇವರು ವಿಶೇಷ ಪೂಜೆ ಸಲ್ಲಿಸಿದರು.
ಶಾಸಕರಾದ ದಿನಕರ. ಕೆ. ಶೆಟ್ಟಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ, ಶ್ರೀಕ್ರಷ್ಣ ಕಾಮಕರ ತಶೀಲ್ದಾರರು ಕುಮಟಾ ಹಾಗೂ ಅನೇಕ ಗಣ್ಯರು ಆಗಮಿಸಿದ್ದರು. ಗೀತಾ ಮತ್ತು ಗಿರೀಶ್ ಎಂ ನಾಯ್ಕ್ ಹೊನ್ನಾವರ ಇವರು ಗುರು ಸೇವೆಯನ್ನು ಸಲ್ಲಿಸಿದರು. ಕೋನಳ್ಳಿಯ ಗಜಾನನ ವೆಂಕ್ಟ ನಾಯ್ಕ್ ಸಿಹಿ ವಿತರಿಸಿದರು.