ಸುದ್ದಿಬಿಂದು ಬ್ಯೂರೋ ವರದಿ

ಕುಮಟಾ: ಕರ್ನಾಟಕ ಪ್ರದೇಶ ಜನತಾ ದಳ (ಜಾತ್ಯಾತೀತ) ವತಿಯಿಂದ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ “ಜನರೊಂದಿಗೆ ಜನತಾ ದಳ” ಸದಸ್ಯತ್ವ ಅಭಿಮಾಯಾನ ಕಾರ್ಯಕ್ರಮಕ್ಕೆ ನಾಳೆ ರವಿವಾರ ಬೆಳಿಗ್ಗೆ ಕುಮಟಾದ ಪುರಭವನದಲ್ಲಿ ಜೆಡಿಎಸ್‌ ರಾಜ್ಯಯುವ ಘಟಕದ ಅಧ್ಯಕ್ಷ ನಿಖಿಲ್‌ಕುಮಾರ ಸ್ವಾಮಿ ಚಾಲನೆ ನೀಡಲಿದ್ದಾರೆ.

ಕುಮಟಾಕ್ಕೆ ಆಗಮಿಸಲಿರುವ ನಿಖಿಲ್‌ಕುಮಾರ ಸ್ವಾಮಿ ಅವರನ್ನ , ಪಟ್ಟಣದ ಗಿಬ್‌ ಸರ್ಕಲ್‌ನಿಂದ ಸಾವಿರಾರೂ ಮಂದಿ ಜೆಡಿಎಸ್‌ ಕಾರ್ತಕರ್ತರು, ಅವನ್ನ ಬೈಕ್‌ ರ್ಯಾಲಿ ಮೂಲಕ ಕಾರ್ಯಕ್ರಮ ನಡೆಯುವ ಪುರಭವನಕ್ಕೆ ಕರೆತರಲಿದ್ದಾರೆ. ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೆಡಿಎಸ್‌ ಮುಖಂಡರು,ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಅವರೊಂದಿಗೆ ಜೆಡಿಎಸ ರಾಜ್ಯ ಕೋರ್‌ ಕಮಿಟಿ ಸದಸ್ಯ ಹಾಗೂ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮುಖಂಡ ಸೂರಜ್‌ ನಾಯ್ಕ ಸೋನಿ, ಉತ್ತರಕನ್ನಡ ಜಿಲ್ಲೆಯ ಜೆಡಿಎಸ್‌ ಅಧ್ಯಕ್ಷರು, ಕುಮಟಾ ತಾಲೂಕಾಧ್ಯಕ್ಷ ಸಿ ಜಿ ಹೆಗಡೆ,  ಹೊನ್ನಾವರ ತಾಲೂಕಾಧ್ಯಕ್ಷ ಟಿ ಟಿ ನಾಯ್ಕ, ಸೇರಿದಂತೆ ಅನೇಕು ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪಕ್ಷದ ಕಾರ್ಯಕ್ರಮದ ಬಳಿಕ ಕೋನಳ್ಳಿಯಲ್ಲಿ ನಡೆಯುವ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮಿಗಳಿಂದ ಆರ್ಶಿವಾದ ಪಡೆಯಲಿದ್ದಾರೆ,

ಇದನ್ನೂ ಓದಿ: ವೈದ್ಯರ ಹೋಂ ಸ್ಟೇ ಅಕ್ರಮ : ಪ್ರವಾಸೋದ್ಯಮ ಇಲಾಖೆಯಿಂದ ಸಿಕ್ಕಿಲ್ಲ ಅನುಮತಿ