ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ :ಮೂರು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬಂಧಿತರಾದ ಶಿರಸಿ ನಗರಸಭೆಯ ಕಂದಾಯ ನಿರೀಕ್ಷಕ ರಾಮಚಂದ್ರ ವರ್ಣೇಕರ್, ಮತ್ತು ಬಿಜೆಪಿ ಸದಸ್ಯ ಗಣಪತಿ ನಾಯ್ಕ ರ ಜಾಮೀನು ಅರ್ಜಿಗಳನ್ನು ಗೌರವಾನ್ವಿತ ಸೆಷನ್ಸ್ ಮತ್ತು ವಿಶೇಷ ನ್ಯಾಯಾಧೀಶರಾದ ಡಿ.ಎಸ್.ವಿಜಯಕುಮಾರ್ ತಿರಸ್ಕರಿಸಿದ್ದಾರೆ.
ಗಣಪತಿ ಹಾಗೂ ರಾಮಚಂದ್ರ ಜಾಮೀನಿಗಾಗಿ ತಮ್ಮ ವಕೀಲರ ಮೂಲಕ ಅರ್ಜಿ ಹಾಕಿದ್ದರು.ಲೋಕಾಯುಕ್ತರ ಪರ ಕಾರವಾರದ ವಕೀಲರಾದ ಎಲ್.ಎಂ.ಪ್ರಭು ವಾದಿಸಿದ್ದರು. ಜಮೀನು ನೀಡದಂತೆ ವಾದಿಸಿದ್ದರು.ಇಬ್ಬರು ಪ್ರಭಾವಿಗಳಾಗಿದ್ದು, ಸಾಕ್ಷಿನಾಶ ಹಾಗೂ ಬೆದರಿಕೆಯ ಸಾಧ್ಯತೆಗಳನ್ನು ನ್ಯಾಯಾಧೀಶರಿಗೆ ಮನವರಿಕೆ ಮಾಡಿದ್ದರು . ಅಲ್ಲದೆ ಆರೋಪಿಗಳು ಕಾರ್ ನಲ್ಲಿ ಕುಳಿತು ಮೂರು ಲಕ್ಷ ರೂ.ಲಂಚ ಪಡೆಯುವಾಗ, ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು. ಈಗ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.ಕಾರವಾರ ಕಾರಾಗೃಹದಲ್ಲಿ ಲಂಚಪಡೆದವರನ್ನು ಇಡಲಾಗಿದೆ.
ಇದನ್ನೂ ಓದಿ : ನಾಳೆ ಉತ್ತರಕನ್ನಡ ಜಿಲ್ಲೆಯ ಐದು ತಾಲೂಕಿನ ಶಾಲಾ-ಕಾಲೇಜಿಗೆ ರಜೆ ಘೋಷಣೆ