ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿರುವ The Karwar Urban Co-operative Bank ಗೆ ನೀಡಿದ್ದ ಲೈಸೆನ್ಸ್ ಅನ್ನು Reserve Bank of India (RBI) ರದ್ದುಗೊಳಿಸಿದೆ.
ಕೆಲವು ತಿಂಗಳ ಹಿಂದೆ ಠೇವಣಿದಾರರಿಗೆ ಹಣ ರಿಫಂಡ್ ಮಾಡದೇ ವಿವಾದಕ್ಕೆ ಸಿಲುಕಿದ್ದ ಈ ಬ್ಯಾಂಕ್, ಈಗ RBI ನ ನಿರ್ಧಾರದ ಅನ್ವಯ ಬ್ಯಾಂಕಿಂಗ್ ಪ್ರಕ್ರಿಯೆಗಳಿಂದ ಸಂಪೂರ್ಣವಾಗಿ ಹೊರ ಬಿಳಲಿದೆ. RBI ಪತ್ತೆ ಹಚ್ಚಿದಂತೆ, ಬ್ಯಾಂಕ್‌ನಲ್ಲಿ ಕಡ್ಡಾಯ capital adequacy ಇಲ್ಲದೆ, ವ್ಯವಹಾರ ಹಾಗೂ ಆದಾಯ ಗಳಿಕೆ ಸಾಮರ್ಥ್ಯವೂ ಕುಸಿದಿದೆ.
ಈ ನಿರ್ಧಾರದ ಪರಿಣಾಮವಾಗಿ, ಇಂದು ಗುರುವಾರದಿಂದ all banking operations ಸ್ಥಗಿತಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ಬ್ಯಾಂಕ್ ಮುಚ್ಚುವಂತೆ ಸೂಚನೆ ನೀಡಲಾಗಿದೆ. ಜೊತೆಗೆ, ಬ್ಯಾಂಕ್ ಮುಚ್ಚುವ ಪ್ರಕ್ರಿಯೆಗಾಗಿ liquidator ನೇಮಕ ಮಾಡುವಂತೆ ಶಿಫಾರಸು ಮಾಡಲಾಗಿದೆ. ಬ್ಯಾಂಕ್ ಸಂಪೂರ್ಣವಾಗಿ ಮುಚ್ಚಿದ ನಂತರ, ಠೇವಣಿದಾರರಿಗೆ Deposit Insurance and Credit Guarantee Corporation (DICGC) ನಿಂದ 5 ಲಕ್ಷದವರೆಗೆ ವಿಮಾ ಪರಿಹಾರ ದೊರೆಯುವ ಸಾಧ್ಯತೆಯಿದೆ. RBI ಪ್ರಕಾರ, ಈ ಬ್ಯಾಂಕ್‌ನ 92.9% ಠೇವಣಿದಾರರು ತಮ್ಮ ಸಂಪೂರ್ಣ ಠೇವಣಿಯನ್ನು ವಿಮಾ ಪರಿಹಾರದ ರೂಪದಲ್ಲಿ ಪಡೆಯುವ ಹಕ್ಕು ಹೊಂದಿದ್ದಾರೆ.
ಈ ತನಕ ವಿಮಾ ವ್ಯಾಪ್ತಿಯೊಳಗಿನ ಠೇವಣಿಗಳಲ್ಲಿ 37.79 ಕೋಟಿ ರೂ. ಪರಿಹಾರವಾಗಿ ಪಾವತಿಸಲಾಗಿದೆ. ಬ್ಯಾಂಕ್ ಮುಂದುವರಿಯುವುದು ಠೇವಣಿದಾರರ interest ಗೆ ವಿರುದ್ಧವಾಗಲಿದೆ ಎಂಬ ತೀರ್ಮಾನಕ್ಕೆ RBI ಬಂದಿದೆ. ಇನ್ನೊಂದೆಡೆ, ಇತ್ತೀಚಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ 250ಕ್ಕೂ ಹೆಚ್ಚು ಸಹಕಾರ ಬ್ಯಾಂಕುಗಳು ನಷ್ಟದಲ್ಲಿವೆ. ಕಾರವಾರದಲ್ಲಿಯೂ ಕೆಲವು ಬ್ಯಾಂಕುಗಳು deposit repayment ಮಾಡದೇ ಮುಚ್ಚುವ ಹಂತಕ್ಕೆ ತಲುಪಿವೆ. ಇದಲ್ಲದೇ ಕೆಲವು ಬ್ಯಾಂಕುಗಳು ಗ್ರಾಹಕರಿಗೆ ಹಣ ನೀಡದೇ ₹50 ಕೋಟಿಗೂ ಅಧಿಕ ವಂಚನೆ ಮಾಡಿದ ಪ್ರಕರಣಗಳು ದಾಖಲಾಗಿದ್ದು, ಪ್ರಸ್ತುತ ಅವುಗಳನ್ನು CID investigation ಗೆ ಒಪ್ಪಿಸಲಾಗಿದೆ.