ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ:ಕಾಳಿ ನದಿಯಲ್ಲಿದ್ದ ಜಿಂಕೆಯ ಮೇಲೆ ಮೊಸಳೆಯೊಂದು ದಾಳಿ ನಡೆಸಿ, ಜಿಂಕೆಯನ್ನು ಎಳೆದೊಯ್ದು ಘಟನೆ ಗುರುವಾರ ನಗರದ ಪಟೇಲ್ ನಗರದ ಹತ್ತಿರದಲ್ಲಿ ನಡೆದಿದೆ.
ನದಿಯಲ್ಲಿದ್ದ ಜಿಂಕೆಯನ್ನು ಮೊಸಳೆ ಬೆನ್ನತ್ತುವ ವೇಳೆ ಅಲ್ಲೇ ನದಿಯ ದಡದ ಹತ್ತಿರ ನಗರಸಭೆಯ ಸಿಬ್ಬಂದಿಗಳಾದ ರಮೇಶ ಮತ್ತು ಪರಶುರಾಮ ಅವರು ಎಷ್ಟೇ ಪ್ರಯತ್ನ ಪಟ್ಟರು ಮೊಸಳೆಯ ದಾಳಿಯಿಂದ ಜಿಂಕೆಯನ್ನು ರಕ್ಷಿಸಲು ಸಾಧ್ಯವಾಗಿಲ್ಲ.ಒಂದು ದಡದಿಂದ ಇನ್ನೊಂದು ದಡಕ್ಕೆ ಬರಲೆತ್ನಿಸಿದ ಜಿಂಕೆಯನ್ನು ಮೊಸಳೆ ಬೆನ್ನಟ್ಟಿ ಹಿಡಿದು ಎಳೆದುಕೊಂಡು ಹೋಗಿದೆ.