ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ:ಜಾಗದ ವಿಷಯವೊಂದಕ್ಕೆ ಸಂಬಂಧಿಸಿದಂತೆ 3ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ,ಶಿರಸಿ ನಗರಸಭೆಯ ಹಾಲಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಮತ್ತು ನಗರಸಭೆಯ ಕಂದಾಯ ಅಧಿಕಾರಿ ಆರ್. ಎಂ. ವರ್ಣೇಕರ್ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬುಧವಾರ ಇಲ್ಲಿನ ಟಿ.ಎಸ್.ಎಸ್.ಹತ್ತಿರದ ಜಿಯೋ ಕಚೇರಿ ಬಳಿ ನಡೆದ ಈ ಕಾರ್ಯಾಚರಣೆಯಲ್ಲಿ, ರಮೇಶ್ ಹೆಗಡೆ ಎಂಬುವವರಿಂದ ಲಂಚ ಪಡೆಯುತ್ತಿದ್ದಾಗ ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನಗರಸಭೆಯಲ್ಲಿ ಪೈಪ್ ಕಳ್ಳತನ ಆರೋಪವನ್ನು ಈಗಾಗಲೇ ಎದುರಿಸುತ್ತಿರುವ ಗಣಪತಿ ನಾಯ್ಕ ಮತ್ತು ಕಂದಾಯ ಅಧಿಕಾರಿ ಆರ್. ಎಂ. ವರ್ಣೇಕರ್ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ :ಗುಹೆಯಿಂದ ಬಂದ ಮಹಿಳೆಯ ರೋಚಕ ಕಥೆ–ಇಸ್ರೇಲಿ ತಂದೆ, ರಷ್ಯಾ ತಾಯಿ, ಭಾರತೀಯ ಮಕ್ಕಳ ಪಯಣ..!