ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಸೈಬರ್ ಅಪರಾಧಿಗಳು ನಕಲಿ .APK ಫೈಲ್‌ಗಳ ಮೂಲಕ ನಾಗರಿಕರ ಮೊಬೈಲ್‌ಗಳನ್ನು ಹ್ಯಾಕ್ ಮಾಡಿ, ಬ್ಯಾಂಕ್ ಖಾತೆಗಳ ಖಾಸಗಿ ಮಾಹಿತಿ ಕದ್ದು, ಹಣ ಕಳವು ಮಾಡುತ್ತಿರುವಂತಹ ಹಲವಾರು ಪ್ರಕರಣಗಳು ದೇಶದಾದ್ಯಂತ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕುಮಟಾ ಪೊಲೀಸ್ ಇಲಾಖೆ ಎಚ್ಚರಿಕೆ ಸೂಚನೆ ಹೊರಡಿಸಿದ್ದಾರೆ.
ಸದ್ಯದಲ್ಲಿ ಸೈಬರ್ ಅಪರಾಧಿಗಳು ಈ ಕೆಳಕಂಡ ಹೆಸರಿನಲ್ಲಿ ನಕಲಿ ಆ್ಯಪ್‌ಗಳನ್ನು ಜನರಿಗೆ ಕಳುಹಿಸುತ್ತಿದ್ದಾರೆ:
🔹 PM Kissan Yojana.apk
🔹 Gruha Lakshmi.apk
🔹 SBI Rewards.apk
🔹 Axis Rewards.apk
🔹 ಮದುವೆಯ ಆಮಂತ್ರಣ.apk
ಈ ಆ್ಯಪ್‌ಗಳನ್ನ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿದರೆ,ನಿಮ್ಮ ಫೋನ್‌ನ ನಿಯಂತ್ರಣ ಸಂಪೂರ್ಣವಾಗಿ ಸೈಬರ್ ಅಪರಾಧಿಗಳ ಕೈಗೆ ಹೋಗುವ ಸಾಧ್ಯತೆ ಇದೆ. ಇದರಿಂದಾಗಿ: OTP ಹಾಗೂ SMSಗಳನ್ನು ಅವರು ಓದಬಹುದಾಗಿದೆ, ಗೂಗಲ್ ಪೇ, ಫೋನ್ ಪೇ ಮೂಲಕ ನೇರವಾಗಿ ಹಣ ಕಳವು ಮಾಡಬಹುದು, ಬ್ಯಾಂಕ್ ಖಾತೆಗಳಿಗೆ ಲಾಗಿನ್ ಆಗಬಹುದು, ವ್ಯಕ್ತಿಯ ಖಾಸಗಿ ಮಾಹಿತಿಯೂ ಕಸಿದುಕೊಳ್ಳಬಹುದು.ಈ ರೀತಿಯ ಮೋಸಕ್ಕೆ ಈಗಾಗಲೇ ಹಲವಾರು ಮಂದಿ ಬಲಿಯಾಗಿದ್ದು, ತಮ್ಮ ಖಾತೆಗಳಿಂದ ಸಾವಿರಾರು ದೋಚಿರುವ ಪ್ರಕರಣಗಳು ವರದಿಯಾಗಿವೆ.
ಸೈಬರ್ ಸುರಕ್ಷತೆಗೆ ಸಾರ್ವಜನಿಕರಿಗಾಗಿ ಸಲಹೆಗಳು :
ಯಾವ ಆ್ಯಪ್‌ಗಳನ್ನು ಬೇಕಾದರೂ Google Play Store ನಿಂದ ಮಾತ್ರ ಡೌನ್‌ಲೋಡ್ ಮಾಡಿಕೊಳ್ಳಿ, Google Play Protectನ್ನು ಸದಾ ಆನ್ ಇಟ್ಟುಕೊಳ್ಳಿ,WhatsApp, Telegram, ಅಥವಾ SMS ಮೂಲಕ ಬಂದ .apk ಫೈಲ್‌ಗಳನ್ನು ಯಾವತ್ತೂ ಇನ್‌ಸ್ಟಾಲ್ ಮಾಡಬೇಡಿ, “Install from Unknown Sources” ಎಂಬ ಆಯ್ಕೆಯನ್ನು ಆಫ್ ಮಾಡಿ ಇಟ್ಟುಕೊಳ್ಳಿ,
ನಕಲಿ ಆ್ಯಪ್‌ನ್ನು ಈಗಾಗಲೇ ಇನ್‌ಸ್ಟಾಲ್ ಮಾಡಿದರೆ ಏನು ಮಾಡಬೇಕು?
ಮೊದಲು ಮೊಬೈಲ್ ಡೇಟಾ ಅಥವಾ Wi-Fi ಆಫ್ ಮಾಡಿರಿ, ಆ್ಯಪ್‌ನ್ನು ಕೂಡಲೇ ಅನ್‌ಇನ್‌ಸ್ಟಾಲ್ ಮಾಡಿ ,,ಅತಿ ಶೀಘ್ರದಲ್ಲಿ ಆ್ಯಂಟಿವೈರಸ್ ಮೂಲಕ ಮೊಬೈಲ್‌ನ್ನು ಸ್ಕ್ಯಾನ್ ಮಾಡಿ ಸೈಬರ್ ಅಪರಾಧ ಹೆಲ್ಪ್‌ಲೈನ್ 1930 ಗೆ ಕರೆ ಮಾಡಿ ಅಥವಾ www.cybercrime.gov.in ನಲ್ಲಿ ದೂರು ದಾಖಲಿಸಬಹುದಾಗಿದೆ. ಈ ಮೂಲಕ ಕುಮಟಾ ಪೊಲೀಸರು ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ,ಯಾವುದೇ ಅನುಮಾನಾಸ್ಪದ ಆ್ಯಪ್ ಇನ್‌ಸ್ಟಾಲ್ ಮಾಡುವ ಮುನ್ನ ತಪಾಸಣೆ ಮಾಡಿಕೊಳ್ಳುವಂತೆ, ಹಣ ಕಳೆದುಕೊಳ್ಳದಂತೆ ಜಾಗೃತರಾಗಿರುವಂತೆ ವಿನಂತಿಸಿದ್ದಾರೆ.
ಹೆಚ್ಚು ಮಾಹಿತಿಗಾಗಿ :
ಸೈಬರ್ ಸೆಲ್, ಕುಮಟಾ ಪೊಲೀಸ್ ಠಾಣೆ
📞 ಸಹಾಯ ಸಂಖ್ಯೆ: 1930
🌐ವೆಬ್‌ಸೈಟ್: www.cybercrime.gov.in
#APKScamAlert #FakeAppWarning #CyberCrimeAlert #StaySafeOnline #KumtaPolice
ಇದನ್ನೂ ಓದಿ :-ಮರ ಬಿದ್ದರೂ ಪ್ರಾಣ ಉಳಿಸಿಕೊಂಡ ಬೈಕ್ ಸವಾರ : ಭಟ್ಕಳದಲ್ಲಿ ನಡೆದ ಘಟನೆ