ಸುದ್ದಿಬಿಂದು ಬ್ಯೂರೋ ವರದಿ

ಜೋಯಿಡಾ: ತಾಲೂಕಿನ ರಾಮನಗರದಲ್ಲಿ ವ್ಯೆಕ್ತಿಯೊರ್ವ ಅಪ್ರಾಪ್ತ ಬಾಲಕನಿಗೆ ಕತ್ತಿ ತೋರಿಸಿ ಹಲ್ಲೆ ಮಾಡಿದ ವಿಡಿಯೋವೊಂದು ಇದೀಗ ಎಲ್ಲೆಡೆ ಸಾಮಾಜಿಕ ಜಾಲ ತಾಣಗಳಲ್ಲಿ ಪುಲ್‌ ವೈರಲ್ ಆಗತ್ತಿದೆ.

ಯಾವುದೋ ಒಂದು ಸಣ್ಣ ವಿಷಯಕ್ಕೆ ಸಂಭಂದಿಸಿದಂತೆ ರಾಮನಗರ ಭಾಗದ ವ್ಯೆಕ್ತಿಯೊರ್ವ ನಡು ರಸ್ತೆಯಲ್ಲಿ ಅಪ್ರಾಪ್ತ ಬಾಲಕನ ಕೊರಳ ಪಟ್ಟಿ ಹಿಡಿದು ಮರಾಠಿ ಭಾಷೆಯಲ್ಲಿ ನಿನ್ನನ್ನು ಕೊಂದು ಹಾಕುತ್ತೇನೆ ಎಂದು ಹೇಳುತ್ತಾ ಕತ್ತಿ ತೋರಿಸಿ ಹೆದರಿಸಿದ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದು, ಯಾವ ಕಾರಣಕ್ಕೆ ಈ ಜಗಳ ನಡೆದಿದೆ ಎಂಬುದು ಪೋಲಿಸರ ತನಿಖೆ ನಂತರ ತಿಳಿದು ಬರಬೇಕಿದೆ‌.

 ತಪ್ಪು ಯಾರೆ ಮಾಡಿದರು ಶಿಕ್ಷೆ ನೀಡಲು ಕಾನೂನು ,ನ್ಯಾಯಾಲಯ ಇದೆ ಹೀಗೆ ರಸ್ತೆಯಲ್ಲಿ ಕತ್ತಿ ಹಿಡಿದು ಹೆದರಿಸುವುದು ಗುಂಡಾ ವರ್ತನೆಯಾಗಿದ್ದು ಕೂಡಲೇ ಈ ಬಗ್ಗೆ ಕ್ರಮ ಆಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ದ್ಯ ರಾಮನಗರ ಭಾಗದಲ್ಲಿ ಇಂಥಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಹಿರಿಯ ಪೋಲಿಸ ಅಧಿಕಾರಿಗಳು ಗಮನ ಹರಿಸಿ ಜನರ ರಕ್ಷಣೆ ಮಾಡಬೇಕಿದೆ.

ಇದನ್ನೂ ಓದಿ :ಉತ್ತರಕನ್ನಡದಲ್ಲಿ ಮೂರುದಿನ ಭಾರೀ ಮಳೆ : ಹವಮಾನ ಇಲಾಖೆ ಮುನ್ಸೂಚನೆ