ಇವರು ನಮ್ಮೂರಿನ ಭಟ್ರು @ಭಾಸ್ಕರ_ದೇಸಾಯಿ.
ಸರಳ ಸಜ್ಜನರಿವರು. ಹಿಡಿದ ಕೆಲಸವನ್ನು ಪಟ್ಟುಬಿಡದೆ ಮಾಡಿ ಮುಗಿಸುವ ಸಾಹಸಿಗರು.
ನಮ್ಮ ಗ್ರಂಥಾಲಯದ ನಿರಂತರ ಓದುಗರಿವರು.
ಈಗ ಸುಮಾರು ೭೩ರ ಇಳಿ ವಯಸ್ಸಿನಲ್ಲೂ ಗ್ರಂಥಾಲಯದಲ್ಲಿರುವ ಎಲ್ಲಾ ದಿನ ಪತ್ರಿಕೆ, ವಾರ, ಪಾಕ್ಷಿಕ ಹಾಗೂ ಮಾಸ ಪತ್ರಿಕೆಗಳನ್ನೆಲ್ಲಾ ಸಮಾಧಾನದಿಂದ ಓದಿಕೊಂಡು ಹೋಗುವರು.
ಅಷ್ಟೇ ಅಲ್ಲದೇ ಜ್ಞಾನ ಭಂಡಾರದಲ್ಲಿರುವ ಪುಸ್ತಕಗಳನ್ನೆಲ್ಲಾ ತಿರುವಿ ತಿರುವಿ ಎಡ ಪಂಥೀಯ ಬಲ ಪಂಥೀಯ ಲೇಖಕರಗಳನ್ನ ಪರಿಚಯಿಸುವ ಪರಿ ಅಗಮ್ಯವಾದುದು.
ಪದವೀಧರರಾಗಿರುವ ಇವರು ಕುಮಟಾ ತಾಲ್ಲೂಕಿನ ಬರ್ಗಿಯಲ್ಲಿ ಸಾಂಪ್ರದಾಯಿಕ ವೈದಿಕ ಕುಟುಂಬದಲ್ಲಿ ಪಾರ್ವತಿ ಮತ್ತು ವೆಂಕಟ್ರಮಣ ದಂಪತಿಗಳ ಸುಪುತ್ರರಾಗಿ ೧೯೫೩ರಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬರ್ಗಿಯಲ್ಲಿ ಮುಗಿಸಿ, ಹೈಸ್ಕೂಲ್ ಶಿಕ್ಷಣವನ್ನು ಮಿರ್ಜಾನಲ್ಲಿ ಮುಗಿಸಿರುವರು. ಹಾಗೆ ಬಿ ಎ ಪದವಿಯನ್ನು ಕುಮಟಾದಲ್ಲಿ ಮುಗಿಸಿ ವೈದಿಕ ವೃತಿಗೆ ಬೇಕಾಗುವ ಮಂತ್ರಗಳನ್ನು ಗೋಕರ್ಣದಲ್ಲಿ ಅಭ್ಯಸಿಸಿ ೧೯೬೬ರಿಂದ ನಿರಂತರ ೫೦ ವರ್ಷಗಳ ಕಾಲ ವಂಶ ಪಾರಂಪರ್ಯ ಅರ್ಚಕರಾಗಿ, ಗ್ರಾಮ ಒಕ್ಕಲಿಗ ಸಮಾಜ ಹಾಗೂ ಗ್ರಾಮ ಪುರೋಹಿತ ಸೇವೆ ಸಲ್ಲಿಸಿರುವರು. ಜೊತೆಗೆ ೧೯೭೨ ರಿಂದ ೨೦೧೨ರವರೆಗೂ ಬರ್ಗಿಯ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಮುಖ್ಯ ಕಾರ್ಯದರ್ಶಿಯಾಗಿ ತುಂಬಾ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಿರುವರು.
ದಿನಂಪ್ರತಿ ಬರ್ಗಿಯ ಮಹಾಲಿಂಗೇಶ್ವರ ದೇವಸ್ಥಾನದ ಕೆಲಸದಲ್ಲಿ ಯಾವುದೇ ಲೋಪ_ದೋಷ ಬರದಂತೆ ಪೂಜಾ_ಕೈಂಕರ್ಯ ಮುಗಿಸಿ ಬ್ಯಾಂಕ್ ಗೆ ಹಾಜಾರಾಗುವರು.ಪುಸ್ತಕ ಓದುವುದರೊಂದಿಗೆ ಸಮಾಜ ಸುಧಾರಕರಾಗಿಯೂ ಕೆಲಸ ಮಾಡಿರುವರು.ನಮ್ಮ ಗ್ರಂಥಾಲಯ ಶಿಥಿಲಾವಸ್ಥೆಯಿಂದ ಹೊಸ ಕಟ್ಟಡಕ್ಕೆ ಬರಲು ನಮ್ಮೆಲ್ಲರೊಂದಿಗೆ ಭಟ್ರ ಶ್ರಮ ಮೆಚ್ಚುವಂತದ್ದು.
ಓದುವ ಹವ್ಯಾಸ ಉಳ್ಳ ಇವರು ತಮ್ಮ ಮನೆಯಲ್ಲಿಯೂ
ಪುಸ್ತಕದ ಪುಟ್ಟ ಮನೆ ಮಾಡಿರುವುದು ತುಂಬಾ ಖುಷಿ ಕೊಡುವಂತದ್ದಾಗಿದೆ. ತಿಂಗಳಿಗೊಮ್ಮೆಯಾದ್ರು @ಮೈತ್ರಿ_ಪ್ರಿಂಟರ್ಸ್ ಗೋಕರ್ಣ ಹೋಗಿ ಬರೋರು ಕಾರಣ ತಾವು ಓದಿರುವ ವಾರ ಪತ್ರಿಕೆಗಳ ತುಂಬಾ ಉಪಯುಕ್ತವಾಗಿರುವ ಬರಹ, ಲೇಖನ, ಆರೋಗ್ಯ ಪರಿಸರ ಹೀಗೆ ಹತ್ತು ಹಲವಾರು ಪ್ರಕಟವಾದ ಪತ್ರಿಕೆಯಿಂದ ಕಟ್ ಮಾಡಿ ಮುಂದಿನ ಪೀಳಿಗೆಯ ಓದುಗರಿಗೆ ಅನುಕೂಲಕರವಾಗುವಂತೆ ಪ್ರಿಂಟ್ ಮಾಡಿ ಬುಕ್ ಬಾಂಡ್ ಮಾಡಿಸಿರುವರು.
ಇವರು ನಿರಂತರ ಓದುಗರಾಗಿ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರು ಆಗಿರುವರು.
ಹೀಗೆ ಭಾಸ್ಕರ್ ದೇಸಾಯವರ ಓದಿನ ಪರಿ ಅವರು ಓದಿನ ಮನೆಗೆ ತೋರಿಸುವ ಕಾಳಜಿ ಎಲ್ಲಾ ಓದುಗರಿಗೂ ಮಾದರಿ ಆಗುವಂತಾಗಲಿ…
ಕು. ಜಿ… ✍️