ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಮಾಧ್ಯಮ ಕ್ಷೇತ್ರಗಳು ಈ ಹಿಂದಿನಂತಿಲ್ಲ. ಮುಂದಿನ ಸರಿಸುಮಾರು ಒಂದು ದಶಕದಲ್ಲಿ ಪತ್ರಿಕೆ ಹಾಗೂ ಟಿವಿ ಚಾನಲ್ಗಳು ಸಂಪೂರ್ಣವಾಗಿ ದೂರವಾದ್ರೂ ಸಹ ಅಚ್ಚರಿ ಪಡಬೇಕಾಗಿಲ್ಲ ಎಂದು ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯ ಸಂಪಾದಕ ಮಹಾಲ ಸೀತಾಳಬಾವಿ ಕಳವಳ ವ್ಯಕ್ತಪಡಿಸಿದರು
ಜಿಲ್ಲಾ ಕಾರ್ತನಿರತ ಪತ್ರಕರ್ತರ ಸಂಘದಿಂದ ಶಿರಸಿಯ ಟಿಎಂಎಸ್ ಸಭಾಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನಿಸಿ ಅವರು ಮಾತ್ನಾಡಿದ್ದರು. ರಾಜ್ಯದಲ್ಲಿನ ಬಹುತೇಕ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲಿ ಉತ್ತರಕನ್ನಡ ಜಿಲ್ಲೆಯವರೆ ಹೆಚ್ಚಾಗಿದ್ದು, ಮಾಧ್ಯಮ ಕ್ಷೇತ್ರಕ್ಕೆ ಜಿಲ್ಲೆಯ ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಇನ್ನೂ ಪತ್ರಿಕೋದ್ಯಮ ಪದವಿ ಪಡೆದವರೆಲ್ಲರನ್ನು ಪತ್ರಕರ್ತರು ಎಂದು ಒಪ್ಪಿಕೊಳ್ಳಲು ಸಾದ್ಯವಿಲ್ಲ..ಪ್ರತಿಕೋದ್ಯಮದ ಬಗ್ಗೆ ಅನುಭವ ಹಾಗೂ ಬದ್ದತೆ ಇರಬೇಕು..ಇವತ್ತಿನ ದಿನದಲ್ಲಿ ಪತ್ರಿಕೋದ್ಯಮದಲ್ಲಿ ಸಾಕಷ್ಟು ಸವಾಲುಗಳನ್ನ ಎದುರಿ ಮುನ್ನಡೆಯಬೇಕಿದೆ ಎಂದರು…
ಡಿವೈಎಸ್ ಪಿ ಶಿರಸಿ ಗೀತಾ ಪಾಟೀಲ ಅವರು ಸಹ ಉಪಸ್ಥಿತರಿದ್ದು,ಕಾರ್ಯಕ್ರಮದ ಕುರಿತಾಗಿ ಮಾತ್ನಾಡಿದರು.
ಅಧ್ಯಕ್ಷತೆ ವಹಿಸಿದ ಕಾರ್ಯನಿರಂತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ, ಸುಬ್ರಾಯ್ ಭಟ್ ಬಕ್ಕಳ್, ಸಂಘದ ಉಪಾಧ್ಯಕ್ಷ ವಿಠಲದಾಸ ಕಾಮತ್ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರ ಕುರಿತಾಗಿ ವಿಸ್ತಾರವಾಗಿ ಮಾತ್ನಾಡಿದರು,ಯುಕೆಡಬ್ಲ್ಯುಜೆ,ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ, ಯುಕೆಡಬ್ಲ್ಯುಜೆ, ಬಸವರಾಜ ಪಾಟೀಲ, ರಾಜ್ಯ ಸಮಿತಿ ಸದಸ್ಯರು, ಕೆಯುಡಬ್ಲ್ಯುಜೆ ರಾಜೇಂದ್ರ ಹೆಗಡೆ, ಖಜಾಂಚಿ, ಯುಕೆಡಬ್ಲ್ಯುಜೆ, ರಾಧಾಕೃಷ್ಣ ಭಟ್, ಭಟ್ಕಳ, ನಿಕಟಪೂರ್ವ ಅಧ್ಯಕ್ಷರು, ಯುಕೆಡಬ್ಲ್ಯುಜೆ,
ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ
ಹಿರಿಯ ಪತ್ರಕರ್ತರಾದ ದೀಪಕಕುಮಾರ್ ಶೇಣೈ ಅವರಿಗೆ ಜಿ.ಎಸ್.ಹೆಗಡೆ ಅಜ್ಜಿಬಳ ದತ್ತಿನಿಧಿ ಶೈಲಜಾ ಗೋರನ್ಮನೆ, ಹಿರಿಯ ಪತ್ರಕರ್ತರು, ಕೆ.ಶಾಮರಾವ್ ದತ್ತಿನಿಧಿ,ಗಣೇಶ ಹೆಗಡೆ ಇಟಗಿ, ಹಿರಿಯ ಪತ್ರಕರ್ತರು ಇವರಿಗೆ ಡಾ.ಯು.ಚಿತ್ತರಂಜನ್ ದತ್ತಿನಿಧಿ ಪ್ರಶಸ್ತಿಗಳನ್ನ ನೀಡಿ ಗೌರವಿಸಲಾಯಿತು..