ಸುದ್ದಿಬಿಂದು ಬ್ಯೂರೋ ವರದಿ suddibindu digital news
ಹೈದರಾಬಾದ್‌:   ಹೈದರಾಬಾದ್‌ನಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು , ಸಾರ್ವಜನಿಕರ ಆತಂಕಕ್ಕೂ ಕಾರಣವಾಗಿದೆ.

ಸ್ಥಳೀಯ ವರದಿಗಳ ಪ್ರಕಾರ, ಪ್ರಜ್ಞೆ ಕಳೆದುಕೊಂಡಷ್ಟು ಪ್ರಮಾಣದಲ್ಲಿ ಮದ್ಯಪಾನ ಮಾಡಿದ್ದ‌ ಮಹಿಳೆ‌ ಒಬ್ಬಳು,  ನಿಯಂತ್ರಣ ತಪ್ಪಿ ತನ್ನ ಕಾರನ್ನು ರಸ್ತೆಯ ಮೇಲಲ್ಲದೆ ರೈಲ್ವೆ ಫೆನ್ಸ್‌ (ಕಂಬಿ) ಗಳಿಗೆ ಅಪ್ಪಳಿಸುವಂತೆ ಚಲಾಯಿಸಿದ್ದಾರೆ. “ಹಳಿ ಇಲ್ಲದೇ ಬುಲೆಟ್ ಟ್ರೈನ್ ಓಡಿಸಿದಂತೆ!” ಎಂಬ ಮಾತು ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಕ್ಷಣ ಕ್ಷಣದ ವಿದ್ಯಮಾನಗಳ ತಿಳಿದುಕೊಳ್ಳಿ

ಈ ಘಟನೆ ಕಂಡು ಕೆಲವರು ನಟಿ ಮಾಲಾಶ್ರಿಯ ಶೈಲಿಯನ್ನು ನೆನೆಸಿದರೆ, ಇನ್ನು ಕೆಲವರು ಹಾಸ್ಯನಟ ಸಾಧುಕೋಕಿಲ ಅವರ ಪ್ರಸಿದ್ಧ ಮಾತು “ಅಳತೆ ಮೀರಿದರೆ ಆಪತ್ತು!” ಎನ್ನುವುದನ್ನು ಸ್ಮರಿಸಿದ್ದಾರೆ. ಅದು ಈ ಸ್ಥಳದಲ್ಲೂ ಅಕ್ಷರಶಃ ಸತ್ಯವಾದಂತಿದೆ. ಘಟನೆಯ ಬಳಿಕ ಪೊಲೀಸರು ಆ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಕ್ಕೆ ಕಾನೂನು ಕ್ರಮ ಜರುಗಿಸಿದ್ದಾರೆ.

ಇದನ್ನೂ ಓದಿ:“ಕುಮಟಾ ಅರ್ಬನ್ ಬ್ಯಾಂಕ್ ನೇಮಕಾತಿಯಲ್ಲಿ ಲಂಚದ ಲೀಲೆ: ಮಾರಾಟವಾಯಿತೆ ಸಮಿತಿಯ ನೈತಿಕತೆ?”