ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ಮೀನುಗಾರಿಕೆ ಬಂದರು ಒಳನಾಡು ಜನಸಾರಿಗೆ ಸಚಿವರಾದ ಮಂಕಾಳು ವೈದ್ಯರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಹೊನ್ನಾವರ ತಾಲೂಕಿನಲ್ಲಿ ಸರಿ ಸುಮಾರು 18 ಸಾವಿರ ವಿದ್ಯಾರ್ಥಿಗಳಿಗೆ ಲಾಡು ವಿತರಿಸುವ ಮೂಲಕ ತಮ್ಮ ನಾಯಕನ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಿದ್ದಾರೆ.
ಭಟ್ಕಳ್ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂಕಾಳ ವೈದ್ಯರು 53ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಸವಿ ನೆನಪಿಗಾಗಿ ಅವರ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಹಲವು ರೀತಿಯಲ್ಲಿ ತಮ್ಮ ನಾಯಕನ ಹುಟ್ಟುಹಬ್ಬವನ್ನ ಆಚರಿಸುವುದಕ್ಕೆ ಮುಂದಾಗಿದ್ದು ಕೆಲವರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರೆ ಇನ್ನು ಕೆಲವರು ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿರುವಂತಹ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುವವರಿಗೆ ಊಟವನ್ನು ನೀಡುವ ಮೂಲಕ ಸಚಿವರಿಗೆ ಶುಭಾಶಯ ಕೋರಿದ್ದಾರೆ.
ಸಚಿವರಿಗೆ ವಿದ್ಯಾರ್ಥಿಗಳು ಎಂದರೆ ಅಚ್ಚುಮೆಚ್ಚು ಸಮಸ್ಯೆಗಳಿಗಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಸಮಸ್ಯೆಗೆ ಅವರು ಬಹುಬೇಗ ಸ್ಪಂದಿಸುತ್ತಾರೆ ಎನ್ನುವ ಮಾತಿದೆ. ಮಕ್ಕಳ ಮೇಲೆ ವೈದ್ಯರಿಗಿರುವ ಕಾಳಜಿ ಪ್ರೀತಿಯನ್ನು ಅರಿತಿರುವಂತಹ ಅವರ ಅಭಿಮಾನಿಗಳು ಹೊನ್ನಾವರ ತಾಲೂಕಿನ ಅಂಗನವಾಡಿ ಮಕ್ಕಳಿಗೆ ಮತ್ತು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿ ವರೆಗಿನ ಸುಮಾರು 18000 ವಿದ್ಯಾರ್ಥಿಗಳಿಗೆ ಬೂಂದಿ ಲಾಡು ವಿತರಿಸಿದ್ದಾರೆ.
ಇದನ್ನೂ ಓದಿ