ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಇಲ್ಲಿನ ಬಂದರು ಇಲಾಖೆಯಲ್ಲಿ ಆಡಳಿತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದ ಸುರೇಶ್ ಶೆಟ್ಟಿ ನಿವೃತ್ತಿ ಹಿನ್ನಲೆಯಲ್ಲಿ ಇಂದು ಬೀಳ್ಕೊಡುಗೆ ಸಮಾರಂಭ ನಡೆಯಿತು.
ಬಂದರು ಇಲಾಖೆಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿಗಳು, ಅನೇಕ ಸಂಘ ಸಂಸ್ಥೆಯವರು, ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡು ನಿವೃತ್ತಿ ಜೀವನಕ್ಕೆ ಶುಭ ಕೋರಿದರು. ಸುರೇಶ್ ಶೆಟ್ಟಿ ಅವರು ಕಳೆದ 40 ವರ್ಷದಿಂದ ಬಂದರು ಇಲಾಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಶ್ರಮದಿಂದ ಬಂದು ಸರ್ಕಾರಿ ಉದ್ಯೋಗಕ್ಕೆ ಸೇರಿದ ಅವರು ಇಲಾಖೆಯಲ್ಲಿ ಯಾರೊಂದಿಗೂ ಮನಸ್ಥಾಪ ಮಾಡಿಕೊಳ್ಳದೇ ಉತ್ತಮ ಸೇವೆ ಸಲ್ಲಿಸುವ ಮೂಲಕ ಇತರೇ ಸಿಬ್ಬಂದಿಗಳಿಗೆ ಮಾದರಿಯಾಗಿದ್ದಾರೆ ಎಂದರು.
ಕೇವಲ ಕೆಲಸದಲ್ಲಿ ಮಾತ್ರವಲ್ಲದೇ ಕಾರವಾರದಲ್ಲಿ ಅನೇಕ ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಳ್ಳುವ ಮೂಲಕ ಸಮಾಜ ಸೇವೆಯನ್ನ ಮಾಡುತ್ತಾ ಬಂದಿದ್ದು ಕಾರವಾರದ ಜನರಿಗೆ ಚಿರಪರಿಚಿತ ಅಧಿಕಾರಿಯಾಗಿದ್ದಾರೆ.ಯಾವುದೇ ಕೆಲಸವನ್ನ ಆಗಲ್ಲ ಎಂದು ಮಾಡುವ ಅಧಿಕಾರಿ ಸುರೇಶ್ ಶೆಟ್ಟಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಶೆಟ್ಟಿ ಇಲಾಖೆಗೆ ಸೇರುವಾಗ ಕೇವಲ ಎಸ್ಎಸ್ಎಲ್ಸಿ ಮಾಡಿ ಬಂದಿದ್ದೆ. ಇಲಾಖೆಗೆ ಸೇರಿದ ನಂತರ ಪದವಿ, ಎಲ್ ಎಲ್ ಬಿ ಮಾಡಿದೆ.ಅನೇಕ ಅಧಿಕಾರಿಗಳು ನನಗೆ ಬೆಂಬಲ ನೀಡಿದರು.ಇಲಾಖೆಯಲ್ಲಿ ಅನೇಕ ಅಧಿಕಾರಿಗಳ ಬೆಂಬಲದಿಂದ ನಾನು ಒಳ್ಳೆಯ ಹೆಸರನ್ನ ಪಡೆದಿದ್ದೇನೆ ಎಂದರು.
ದೇವರು ಕೊಟ್ಟ ದೊಡ್ಡ ಆಸ್ತಿ ನನಗೆ ಹೆಂಡತಿ ಮಕ್ಕಳು. ಪ್ರತಿ ಹಂತದಲ್ಲೂ ಬೆಂಬಲಕ್ಕೆ ನಿಂತಿದ್ದಾರೆ. ಇಲಾಖೆಯಲ್ಲಿ ಕೆಲಸ ಮಾಡುವಾಗ ಎಂದು ಬೇಸರ ಪಡದೇ ಕೆಲಸವನ್ನ ಖುಷಿ ಪಟ್ಟೇ ಮಾಡಿದ್ದೇವೆ. ಇಲಾಖೆ ಬರುವ ಮುನ್ನ ಜೀವನದಲ್ಲಿ ಖುಷಿ ಕ್ಷಣ ಕಳೆದಿರಲಿಲ್ಲ. ಇಲಾಖೆಬಂದ ನಂತರ ಒಳ್ಳೆಯ ಕ್ಷಣ ಕಳೆದೆವು ಎಂದರು.
ಕಾರವಾರದಲ್ಲಿ ಪಹರೆ, ಡಾ. ರಾಜ್ ಕುಮಾರ್ ಅಭಿಮಾನಿ ಸಂಘ, ಸತ್ಯಸಾಯಿ ಸೇವಾ ಸಮಿತಿ ಸೇರಿದಂತೆ ಅನೇಕ ಸಂಘ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ಇದು ತೃಪ್ತಿ ಇದೆ. ಬಂದರು ಇಲಾಖೆಯಲ್ಲಿ ಇದ್ದದ್ದಕ್ಕೆ ಸಮಾಜದಲ್ಲಿ ಒಂದಿಷ್ಟು ಕೆಲಸ ಮಾಡಲು ಸಹಕಾರಿಯಾಯಿತು. ಬಂದರು ಇಲಾಖೆಯನ್ನ ಎಂದಿಗೂ ನಾನು ಮರೆಯುವುದಿಲ್ಲ. ಬಂದರು ಇಲಾಖೆ ನನಗೆ ಎಲ್ಲಾ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಬಂದರು ಇಲಾಖೆಯ ಕ್ಯಾಪ್ಟನ್ ಸ್ವಾಮಿ,ತಾರಾನಾಥ್ ರಾಥೋಡ್, ರಾಜ್ ಕುಮಾರ್, ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು..
ಇದನ್ನೂ ಓದಿ
- ಬ್ರೇಕ್ಫಾಸ್ಟ್ ಟೇಬಲ್ ಮೇಲೆ ಸಿಎಂ ನಿರ್ಧಾರ..? ಕುತೂಹಲ ಮೂಡಿಸಿರುವ ನಾಳೆಯ ಸಿದ್ಧು–ಡಿಕೆ ಮಾತುಕತೆ
- ಬಿಸಿಯೂಟ ಸೇವಿಸಿದ 22 ವಿದ್ಯಾರ್ಥಿಗಳು ಅಸ್ವಸ್ಥ
- ಮಠವು ಪರಂಪರೆ ಹಾಗೂ ಆಧುನಿಕತೆಯ ಜೊತೆ ಸೇತುವೆಯಾಗುವ ಪ್ರಮುಖ ಭೂಮಿಯಕೆಯಾಗಲಿ: ನರೇಂದ್ರ ಮೋದಿ
- ಕಾಲ ಬಳಿ ಹೆಡೆ ಎತ್ತಿದ ಕಿಂಗ್ ಕೋಬ್ರಾ! ಕ್ಷಣಾರ್ಧದಲ್ಲಿ ಬುದ್ಧಿವಂತಿಕೆಯಿಂದ ಪತ್ನಿಯನ್ನ ಉಳಿಸಿದ ಪತಿ : ಮಿರ್ಜಾನದಲ್ಲೊಂದು ಅಚ್ಚರಿಯ ಘಟನೆ


