Mumbai : ಮುಂಬೈ : ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪತ್ರವನ್ನು ಹಂಚಿಕೊಂಡಿದ್ದಾರೆ. ಬ್ರಾಹ್ಮಣರ ವಿರುದ್ಧ ನೀಡಿದ ಅಶ್ಲೀಲ ಕಾಮೆಂಟ್‌ಗಾಗಿ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.ಬ್ರಾಹ್ಮಣರ ಮೇಲೆ ಮೂತ್ರವಿಸರ್ಜನೆ ಮಾಡುತ್ತೇನೆ, ಏನು ಸಮಸ್ಯೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
ಅನುರಾಗ್ ಕಶ್ಯಪ್ ಅವರ ಈ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಅವರ ಆ ಹೇಳಿಯನ್ನ ಸಾಕಷ್ಟು ಜಮ ತೀವ್ರವಾಗಿ ಟೀಕೆ ಸಹ ಮಾಡಿದ್ದರು. ಹೀಗಾಗಿ ಅನುರಾಗ್ ಕಶ್ಯಪ್ “ನನ್ನ ಹೇಳಿಕೆಯಿಂದ ಯಾರಾದರೂ ನೋವಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ.ಈ ವಿಷಯದಲ್ಲಿ ನನ್ನ ಮೇಲೆ ಮಾತ್ರ ತಪ್ಪು ಹೊರಿಸಿ, ನನ್ನ ಕುಟುಂಬದ ಮೇಲೆ ತಪ್ಪು ಹೊರತಾಕಬೇಡಿ” ಎಂದು ಅವರು ವಿನಂತಿಸಿದ್ದಾರೆ.
ಸಾಮಾಜಿಕ ಸುಧಾರಕರಾದ ಜ್ಯೋತಿಬಾ ಮತ್ತು ಸಾವಿತ್ರೀಬಾಯಿ ಫುಲೆ ಅವರ ಜೀವನಾಧಾರಿತ ‘ಫುಲೆ’ ಚಿತ್ರದ ವಿವಾದದ ನಡುವೆ ಅನುರಾಗ್ ಕಶ್ಯಪ್ ಅವರು ಮಾಡಿದ ಅಹಂಕಾರಪೂರ್ಣ ಹೇಳಿಕೆಗೆ ಭಾರಿ ಟೀಕೆ ವ್ಯಕ್ತವಾಯಿತು.ತನ್ನ ಹೇಳಿಕೆಯ ಕಾರಣದಿಂದ ತನ್ನ ಕುಟುಂಬಕ್ಕೆ ಬೆದರಿಕೆಗಳು ಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಶುಕ್ರವಾರ (ಏ.18) ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಪತ್ರ ಹಂಚಿಕೊಂಡರು. ಆ ಪತ್ರದಲ್ಲಿ ಅವರು ತಮ್ಮ ಉದ್ದೇಶವನ್ನು ವಿವರವಾಗಿ ವಿವರಿಸಿದ್ದಾರೆ. “ಯಾರಾದರೂ ಕೋಪಗೊಂಡಿದ್ದರೆ, ಅದು ನನ್ನ ಮೇಲೆ ಇರಲಿ. ನಿಮ್ಮ ಮಗಳು, ಕುಟುಂಬ, ಸ್ನೇಹಿತರಿಗಿಂತ ಯಾವುದೇ ಕೆಲಸವು ಮಹತ್ವಪೂರ್ಣವಲ್ಲ.”
“ನನ್ನ ಹೇಳಿಕೆಯ ಕಾರಣದಿಂದ ನನ್ನ ಆತ್ಮೀಯರಿಗೆ ಜೀವ ಬೆದರಿಕೆಗಳು ಬರುತ್ತಿವೆ. ನಾನು ನನ್ಮ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ. ನನ್ನ ಒಂದು ಸಾಲು ತಪ್ಪಾಗಿ ಅರ್ಥಮಾಡಿಕೊಂಡು ದ್ವೇಷ ಹರಡಲಾಗಿದೆ ಎಂಬುದಕ್ಕಾಗಿ ಮಾತ್ರ ನಾನು ಕ್ಷಮೆ ಕೇಳುತ್ತಿದ್ದೇನೆ” ಎಂದು ಅನುರಾಗ್ ಕಶ್ಯಪ್ ಹೇಳಿದರು.
ಇದನ್ನೂ ಓದಿ
- ಕಾರವಾರ ದೇವಭಾಗ ಬೀಚ್ನಲ್ಲಿ ಅದ್ಭುತ ನೋಟ! ರಾಶಿ ರಾಶಿ ಮೀನು ದಡಕ್ಕೆ
- Bigg Boss/ಬಿಗ್ ಬಾಸ್ ಮನೆಗೆ ತಾತ್ಕಾಲಿಕ ಬೀಗ ಜಡಿದ ಅಧಿಕಾರಿಗಳು
- “105 ವರ್ಷಗಳ ಬಳಿಕ ಕೆಡಿಸಿಸಿ ಬ್ಯಾಂಕ್ನ ಇತಿಹಾಸದಲ್ಲಿ ದಿಟ್ಟ ಮಹಿಳೆಯ ಹೊಸ ಅಧ್ಯಾಯ”
- ಶಾಲೆಗಳಿಗೆ ಇನ್ನೂ ಹತ್ತು ದಿನ ರಜೆ ವಿಸ್ತರಣೆ : ಸಿ ಎಂ ಸಿದ್ದರಾಮಯ್ಯ