ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ : ನಗರದ ಇಎಸ್ಐ ಆಸ್ಪತ್ರೆಯ ಆವರಣದಲ್ಲಿ ಕಾರ್ಮಿಕ ನೋರ್ವನ ಮೇಲೆ ಮಂಗವೊಂದು ದಾಳಿ ನಡೆಸಿದ್ದು, ಆತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಎಸ್ಐ ಆಸ್ಪತ್ರೆಯ ಆವರಣದಲ್ಲಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ ಕಾರ್ಮಿಕ ತನ್ನ, ಕೆಲಸ ಮುಗಿಸಿ ಮನೆಗೆ ವಾಪಸ್ ಆಗಬೇಕು ಎನ್ನುವ ವೇಳೆ ಕಾರ್ಮಿಕನಾದ ಅಂಬೇವಾಡಿಯ ನವಗ್ರಾಮದ ನಿವಾಸಿ ಪ್ರವೀಣ್ ವೆಂಕಟೇಶ ವಾಸಂದರ ಎಂಬುವವರ ಮೇಲೆ ಮಂಗ ದಾಳಿ ನಡೆಸಿದ ಮಂಗ ಆತನ ಕಾಲಿಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ.ಮಂಗನ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡ ಪ್ರವೀಣ್ ಅವರನ್ನ ತಕ್ಷಣ ಇಎಸ್ಐ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಮಂಗನ ದಾಳಿಗೆ ಒಳಗಾಗಿರುವ ಪ್ರವೀಣ ಕುಟುಂಬಕ್ಕೆಅರಣ್ಯ ಇಲಾಖೆಯಿಂದ ಪರಿಹಾರ ನೀಡುವುದರ ಜೊತೆಗೆ ಜನರಿಗೆ ಕಾಟ ನೀಡುತ್ತಿರುವ ಮಂಗಗಳನ್ನ ಹಿಡಿದು ಬೇರೆ ಕಡೆ ಬಿಡುವ ಕೆಲಸ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ
- ದರ್ಶನ್ಗೆ ಜಾಮೀನು ಬಾಗಿಲು ಮುಚ್ಚಿದ ಸುಪ್ರೀಂ : ದರ್ಶನ್, ಪವಿತ್ರಾ, ಬ್ಯಾಕ್ ಟು ಜೈಲು
- Su From So Film Budget “ಸು ಫ್ರಮ್ ಸೋ” ಬಜೆಟ್ ಎಷ್ಟು ಗೊತ್ತಾ..? 13 ದಿನಗಳಲ್ಲಿ ಗಲ್ಲಾಪೆಟ್ಟಿಗೆ ಲೂಟಿ.!
- ಶಾಸಕ ಸತೀಶ್ ಸೈಲ್ ಮನೆ ಮೇಲೆ ಇಡಿ ಶೋಧ : ನಗದು, ಚಿನ್ನಾಭರಣ ಸಿಕ್ಕಿರುವ ಶಂಕೆ.!
- ರೇಸಾರ್ಟ್ ಬಳಿ ಗುಂಡಿನ ದಾಳಿ : ಇಬ್ಬರಿಗೆ ಗಾಯ
.