ಭಾರತೀಯ ಮಾರುಕಟ್ಟೆಯಲ್ಲಿ ನಿರಂತರ ಏರಿಕೆಯ ನಂತರ ಚಿನ್ನದ ಬೆಲೆಯಲ್ಲಿ ಬ್ರೇಕ್ ಬಿದ್ದಿದೆ. ಶುಕ್ರವಾರ ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ಕುಸಿದಿದೆ. ಈ ವಾರ ಚಿನ್ನದ ಬೆಲೆಯಲ್ಲಿ ವಾರದ ಕೊನೆಯಲ್ಲಿ ಇಳಿತವಾಗಿದೆ. ಹಾಗಾದರೆ, ಫೆಬ್ರವರಿ 21ನೇ ತಾರೀಖು ಶುಕ್ರವಾರ 24 ಕ್ಯಾರಟ್ ಚಿನ್ನದ ಬೆಲೆ ಎಷ್ಟು? ಪ್ರತಿಯೊಂದು ಕೆಜಿಗೆ ಬೆಳ್ಳಿಯ ಬೆಲೆ ಎಷ್ಟು? ಇಲ್ಲಿಯೇ ತಿಳಿಯಿರಿ.
ಭಾರತೀಯ ಮಾರುಕಟ್ಟೆಯಲ್ಲಿ ನಾಲ್ಕು ದಿನಗಳ ನಿರಂತರ ಏರಿಕೆಯ ನಂತರ ವಾರದ ಕೊನೆಯ ವಹಿವಾಟು ದಿನವಾದ ಶುಕ್ರವಾರ ಚಿನ್ನದ ಬೆಲೆ ಇಳಿದಿದೆ. ಚಿನ್ನದ ಬೆಲೆ ಗಗನಕ್ಕೇರುತ್ತದೆ ಎಂಬ ಭೀತಿಯಲ್ಲಿದ್ದ ಆಭರಣ ಖರೀದಿದಾರರು ಸ್ವಲ್ಪ ನಿಟ್ಟುಸಿರು ಬಿಡುವಂತಾಯಿತು. ನಾಳೆಯ ವಹಿವಾಟಿನಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ರೂ 550 ಇಳಿಕೆಯಾಗಿದ್ದು, 24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ರೂ 640 ಇಳಿಕೆಯಾಗಿದೆ.
ದಿಲ್ಲಿಯಲ್ಲಿ ಚಿನ್ನದ ಬೆಲೆ ಏರಿಕೆ
ದಿಲ್ಲಿ ರಾಷ್ಟ್ರೀಯ ರಾಜಧಾನಿಯಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ರೂ 550 ಇಳಿದು ರೂ 80,550ಕ್ಕೆ ವಹಿವಾಟು ಮಾಡುತ್ತಿದೆ. 24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ರೂ 640 ಇಳಿದು ರೂ 87,550ಕ್ಕೆ ತಲುಪಿದೆ. ಆದರೆ, ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ರೂ 100 ಇಳಿದು ರೂ 1,00,400ಕ್ಕೆ ತಲುಪಿದೆ.
ಇದನ್ನೂ ಓದಿ