ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಹೊಸ ವರ್ಷ ಸ್ವಾಗತಕ್ಕೆ ಕ್ಷಣಗಣನೆ (Countdown to New Year) ಆರಂಭವಾಗಿದ್ದು ,ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿತುಳುಕುತ್ತಿವೆ. ಹೊಟೇಲ್, ಕಡಲತೀರಗಳು ಕಿಕ್ಕಿರಿದಿವೆ..
2024ಕ್ಕೆ ವಿದಾಯ ಹೇಳಿ 2025ಬರಮಾಡಿಕೊಳ್ಳಲು, ಜನ ಉತ್ತರ ಕನ್ನಡ ಜಿಲ್ಲೆಯತ್ತ ಆಗಮಿಸುತ್ತಿದ್ದಾರೆ, ಜಿಲ್ಲೆಯ ಗೋಕರ್ಣ,ಮುರುಡೇಶ್ವರ, ಹೊನ್ನಾವರ, ದಾಂಡೇಲಿ,ಕಾರವಾರ ಸೇರಿ ವಿವಿಧೆಡೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ, ಹೊಟೇಲ್, ಬೀಚ್ ರೆಸಾರ್ಟ್ ಗಳು ಪ್ರವಾಸಿಗರಿಂದ ತುಂಬಿಕೊಂಡಿವೆ, ಹೊಸವರ್ಷದ ಸಂಭ್ರಮಕ್ಕೆ ಪ್ರವಾಸಿಗರನ್ನ ರಂಜಿಸಲು ಎಲ್ಲಡೆ ಸಿದ್ಧತೆಗಳು ಜೋರಾಗಿವೆ.
ಈ ಬಾರೀ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರು ಹರಿದು ಬರುತ್ತಿದ್ದಾರೆ, ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರ ನಿರ್ಭಂದ ಇದ್ದರು ಕೂಡಾ ಬಂದ ಪ್ರವಾಸಿಗರು ಜಿಲ್ಲೆಯ ಬೇರೆ ಬೇರೆ ಕಡಲತೀರದತ್ತ ಮುಖಮಾಡಿ ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ,ಹೊಸವರ್ಷದ ಸಂಭ್ರಮವನ್ನ ಸವಿಯಲು ಈ ಭಾರೀ ಗೋಕರ್ಣ, ಕಾರವಾರ, ಹೊನ್ನಾವರ,ಕಾರವಾರ ಭಾಗಕ್ಕೆ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರು ಹರಿದು ಬರುತ್ತಿದ್ದಾರೆ,ಗೋವಾ ಹೋಗು ಪ್ರವಾಸಿಗರ ಸಂಖ್ಯೆ ಇಳಿಕೆ ಕಂಡಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲೆ ಯಥೇಚ್ಛ ಪ್ರವಾಸಿಗರು ಝೇಂಡಾ ಹೂಡಿದ್ದಾರೆ. ಹೊಸ ವರ್ಷದ ಸಂಭ್ರಮಕ್ಕೆ ಜಿಲ್ಲೆ ಸಜ್ಜಾಗಿದ್ದು ಎಲ್ಲಡೆ ಸಂಭ್ರಮ ಮನೆ ಮಾಡಿದೆ.
ಗಮನಿಸಿ
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ
- Teacher/ಪಾಠ ಕಲಿಯಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಥಳಿತ : ಬಾಸುಂಡೆ ಮೂಡಿಸಿದ ಶಿಕ್ಷಕಿ
- ಭಟ್ಕಳದ ಹಳೆಯ ಕಾಲ ಮುಕ್ತಾಯ – ನಗರಸಭೆಯ ಹೊಸ ಯುಗ ಆರಂಭ ! ಮಂಕಾಳು ವೈದ್ಯ ಸಚಿವರಾದ ಬಳಿಕ ಭಟ್ಕಳಿಗರ ಕನಸು ನನಸು