ಸುದ್ದಿಬಿಂದು ಬ್ಯೂರೋ ವರದಿ
Karwar:ಕಾರವಾರ : ಮಕ್ಕಳು ಕಿರುಕುಳ ನೀಡುತ್ತಾರೆಂದು ಕಾಟ ತಾಳಲಾರದೆ ತಂದೆಯೇ ಮನೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಶಂಕರಮಠ ರಸ್ತೆಯಲ್ಲಿ ನಡೆದಿದೆ.
ಕೃಷ್ಣಾನಂದ ಪಾವಸ್ಕರ(76) ಎಂಬಾತನೆ ಮನೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಯ, ಆತ‌್ಮಹತ್ಯೆ ಮಾಡಿಕೊಂಡ ವಿಡಿಯೋ ಅವರ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇವರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಮೂವರು ಕೂಡ ಪ್ರತ್ಯೇಕ ಬಂಗಾರದ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇನ್ನೂ ಕೃಷ್ಣಾನಂದ ತಾನು ಸಂಪಾಧಿಸಿದ ಆಸ್ತಿ ಹಾಗೂ ಒಂದಿಷ್ಟು ಹಣವನ್ನ ತನ್ನ ಬಳಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಆ ಎಲ್ಲಾ ಹಣ ಹಾಗೂ ಆಸ್ತಿಯನ್ನ ನೀಡುವಂತೆ ಮೂವರು ಮಕ್ಕಳು ತಂದೆಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಈ ವಿಚಾರವಾಗಿ ಆಗಾಗ ಮಕ್ಕಳು ತಂದೆಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇನ್ನೂ ಮೃತ ಕೃಷ್ಣಾನಂದ ಕಿರಿಯ ಮಗನ ಜೊತೆಯಲ್ಲಿ ವಾಸವಾಗಿದ್ದ, ಇನ್ನೂ ತಂದೆಯನ್ನ ಸಾಕುತ್ತಿದ್ದ ಕಿರಿಯ ಮಗ ಸಹ ಎಲ್ಲಾ ಆಸ್ತಿಯನ್ನ ತನ್ನ ಹೆಸರಿಗೆ ಮಾಡಿಕೊಡುವಂತೆ ಹಿಂಸಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ಎಲ್ಲೆ ಇದ್ದರು ತನ್ನಗೆ ನೆಮ್ಮದಿಯಿಲ್ಲ ಎಂದು ಅರಿತ ವೃದ್ಧ ತಾನು ವಾಸವಿದ್ದ ಮನೆಯ ನಾಲ್ಕನೆ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಇನ್ನೂ ಕಟ್ಟಡದಿಂದ ಹಾರಿದ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದರ ಬದಲು. ಮೂವರು ಮಕ್ಕಳು ಆತನ ಮೃತ ದೇಹದ ಮುಂದೆ ಜಗಳ ಆಡಿಕೊಂಡಿರುವ ಘಟನೆ ಸಹ ನಡೆದಿದೆ.
ಜೀವನ ಪೂರ್ತಿ ಕಷ್ಟ ಪಟ್ಟು ಕೊಟ್ಯಾಂತರ ರೂಪಾಯಿ ಹಣ ಗಳಸಿ. ಜೀವನದ ಕೊನೆಯ ದಿನಗಳನ್ನು ನೆಮ್ಮದಿಯಿಂದ ಕಳೆಯಬೇಕು ಅಂದುಕೊಂಡಿದ್ದ ವ್ಯಕ್ತಿ ಮಕ್ಕಳ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿ ಉಂಟಾಗಿರುವುದು ನಿಜಕ್ಕೂ ದುರಂತ…
ಗಮನಿಸಿ
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ
- Teacher/ಪಾಠ ಕಲಿಯಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಥಳಿತ : ಬಾಸುಂಡೆ ಮೂಡಿಸಿದ ಶಿಕ್ಷಕಿ
- ಭಟ್ಕಳದ ಹಳೆಯ ಕಾಲ ಮುಕ್ತಾಯ – ನಗರಸಭೆಯ ಹೊಸ ಯುಗ ಆರಂಭ ! ಮಂಕಾಳು ವೈದ್ಯ ಸಚಿವರಾದ ಬಳಿಕ ಭಟ್ಕಳಿಗರ ಕನಸು ನನಸು
.