ಸುದ್ದಿಬಿಂದು ಬ್ಯೂರೋ ವರದಿ(suddi bindu digital news)
ಬೆಳಗಾವಿ : ಗೊತ್ತುಗುರಿಯಿಲ್ಲದ ಸ್ಥಳಕ್ಕೆ ಯಾರೇ ಹೋದರು ಸಹ ಈಗ ಗೂಗಲ್ ಮ್ಯಾಪ್(Google Maps) ಮೂಲಕ ಪ್ರಯಾಣಿಸುವುದು ಸರ್ವೆ ಸಾಮಾನ್ಯ. ಗೋವಾ ಹೋಗಬೇಕಿದ್ದ ಪ್ರವಾಸಿಗರ ಕುಟುಂಬವೊಂದು ರಸ್ತೆ ತಿಳಿಯದೆ ಗೂಗಲ್ ಮ್ಯಾಪ್ ನಂಬಿಕೊಂಡು ಹೋಗಿ ರಾತ್ರಿ ಪೂರ್ತಿ ಅರಣ್ಯದಲ್ಲೇ ಕಾಲ ಕಳೆದ ಘಟನೆಯೊಂದು ಉತ್ತರಕನ್ನಡ ಜಿಲ್ಲೆಯ ಪಕ್ಕದ ಖಾನಾಪುರದಲ್ಲಿ ನಡೆದಿದೆ.

ಬಿಹಾರದ ರಾಜದಾಸ್ ರಣಜಿತ್ ದಾಸ್ ಕುಟುಂಬ (family of Rajdas Ranjit Das from Bihar) ಆಂದ್ರಪ್ರದೇಶದಿಂದ ಗೋವಾಕ್ಕೆ ಹೊರಟಿದ್ದ ಮಹಿಳೆಯರು ಸೇರಿ ನಾಲ್ವರಿದ್ದ ಕಾರನಲ್ಲಿ ಪ್ರಯಾಣಿಸುತ್ತಿದ್ದರು.ಗೋವಾದಲ್ಲಿ ತಲುಪಬೇಕಿದ್ದ ಸ್ಥಳದ ಲೊಕೇಶನ್ (location) ಹಾಕಿ ಪ್ರಯಾಣ ಬೆಳೆಸಿದ್ದರು. ಗೂಗಲ್ ಮ್ಯಾಪ್ ಪ್ರಕಾರವೇ ಹೋಗುತ್ತಿದ್ದ ಅವರು ದಾರಿ ಸಾಗಿದಂತೆ ಶಿರೋಲಿ ಮತ್ತು ಹೆಮ್ಮಡಗಾ (Shiroli and Hemmadaga) ಮಾರ್ಗ ಮಧ್ಯದ ಮುಖ್ಯ ರಸ್ತೆಯಿಂದ 7-8 ಕಿಮೀ ಒಳಗೆ ಭೀಮಗಡ ವನ್ಯಧಾಮದ ಅರಣ್ಯ (Bhimgad Wildlife Sanctuary) ದೊಳಗೆ ಹೋಗಿದ್ದಾರೆ. ರಾತ್ರಿಯಲ್ಲಿ ಅರಣ್ಯ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ (mobile network) ಸಿಗದೇ ಆ ಕುಟುಂಬ ಪರದಾಡಬೇಕಾಗಿತ್ತು. ಅರಣ್ಯದಲ್ಲಿ ಹಾದಿ ತಪ್ಪಿದರೂ ಭಯಪಡಡೆ ರಾಜದಾಸ್ ಅವರು ತಮ್ಮ ಕುಟುಂಬದ ಎಲ್ಲರಿಗೂ ಧೈರ್ಯ ತುಂಬಿ ರಾತ್ರಿ (Night) ಅಲ್ಲೇ ಕಳೆದಿದ್ದಾರೆ.

ಬೆಳಗಾಗುತ್ತಲೇ ತಾವಿದ್ದ ಸ್ಥಳದಿಂದ ಮೂರ್ನಾಲ್ಕು ಕಿಲೋಮೀಟರ್ ದೂರಕ್ಕೆ‌ ಹೋಗಿ, ಮೊಬೈಲ್ ನೆಟ್‌ವರ್ಕ್ ಸಿಕ್ಕ ಬಳಿಕ ಅವರು 100 ಸಂಖ್ಯೆಗೆ ಕರೆ ಮಾಡಿ ಪೊಲೀಸ್ ಕಂಟ್ರೋಲ್ ರೂಂ (police control room) ಜತೆ ಸಂಪರ್ಕ ಸಾಧಿಸಿ ವಿಚಾರ ಹೇಳಿದ್ದಾರೆ. ಬಳಿಕ ಸ್ಥಳಕ್ಕೆ ಬಂದ 112 ಸಿಬ್ಬಂದಿ ನಾಲ್ವರನ್ನ ಸುರಕ್ಷಿತವಾಗಿ ಕರೆದುಕೊಂಡು ಬಂದು.ಮುಖ್ಯ ರಸ್ತೆಗೆ ಕರೆದುಕೊಂಡು ಗೋವಾ ದಾರಿ ತೋರಿಸಿ ಕೊಟ್ಟಿದ್ದಾರೆ.

ಗಮನಿಸಿ