ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಇಲ್ಲಿನ ಬೈತಕೋಲ್ ಭಾಗದಲ್ಲಿ ಆನೆಕಾಲು ರೋಗ ಲಕ್ಷ್ಣದ ಬಗ್ಗೆ ತಪಾಸಣೆಗೆ ಹೋಗುತ್ತಿರುವ ನರ್ಸ್‌ಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಬಿಡಲಾಗುತ್ತಿದ್ದು, ಇದರಿಂದ ಕಾರವಾರ ಸುತ್ತಮುತ್ತಲಿನ ಜನ ಭಯ ಭೀತರಾಗಿದ್ದಾರೆ.

ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ ಓರಿಸ್ಸಾ, ರಾಜ್ಯದ ಕಾರ್ಮಿಕರು ಸೇರಿದಂತೆ ನಾನಾ ರಾಜ್ಯದ ಕಾರ್ಮಿಕರು ಬೋಟ್‌ಗಲ್ಲಿ ಕೆಲಸ ಮಾಡುವುದಕ್ಕಾಗಿ ಆಗಮಿಸಿದ್ದಾರೆ.ಓರಿಸಾ ಸೇರಿದಂತೆ ಹೊರ ರಾಜ್ಯದಲ್ಲಿ ಆನೆಕಾಲು ರೋಗ ಖಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನಲೆಯಲ್ಲಿ. ಆ ಭಾಗದಿಂದ ಇಲ್ಲಿಗೆ ಬರುವ ಕಾರ್ಮಿಕರ ರಕ್ತ ತಪಾಸಣೆ ಮಾಡುವಂತೆ ಸರಕಾರವೇ ಆದೇಶಿಸಿರುವ ಹಿನ್ನಲೆಯಲ್ಲಿ ಇಲ್ಲಿನ ನರ್ಸಗಳು ಹಾಗೂ ವೈದ್ಯರು ಕಳೆದ ಕೆಲ ದಿನಗಳಿಂದ ರಕ್ತ ತಪಾಸಣೆ ಮಾಡುತ್ತಿದ್ದಾರೆ.

ಅದರೆ ರೀತಿ ನಿನ್ನೆ ಒಂದೇ ದಿನ ಸುಮಾರು 109ಮಂದಿಯ ರಕ್ತ ತಪಾಸಣೆ ಕೂಡ ಮಾಡಲಾಗಿದೆ. ಹೀಗುವಾಗ ಯಾರೋ ಕಿಡಿಗೇಡಿಗಳು ವಾಟ್ಸಾಪ್ ಗ್ರೂಪ್‌ಗಳಲ್ಲಿ ಭಯ ಹುಟ್ಟಿಸುವಂತಹ ಸಂದೇಶಗಳನ್ನ ಹರಿಬಿಡುತ್ತಿದ್ದಾರೆ.ಕಾರವಾರದಲ್ಲಿ ಕೆಲ ನರ್ಸಗಳು ಸುಮ್ಮನೆ ಮನೆ ಮನೆಗೆ ಹೋಗಿ Bp,Sugar Check ಮಾಡಲು ಬರುತ್ತಿದ್ದಾರೆ.ಯಾರು ಮಾಡಿಸಿಕೊಳ್ಳಬೇಡಿ ಅವರು ನೀಡುವ ಇಂಜೆಕ್ಷನ್‌ನಿಂದ HIV ಆಗಿದೆ.ರಾತ್ರಿ ಬೈತಕೂಲ್‌ಗೆ ಅವರು ಬಂದ ಸಂದರ್ಭದಲ್ಲಿ ಪೊಲೀಸರಿಗೆ ತಿಳಿಸಿದ್ದೇವೆ ಎಂದು ಹೇಳಿದಾಗ ಅವರು ಓಡಿ ಹೋಗಿದ್ದಾರೆ ಎನ್ನುವ ಬಗ್ಗೆ ವಾಟ್ಸಾಪ್ ‌ಗಳಲ್ಲಿ ಹರಿಬಿಡುತ್ತಿದ್ದು, ಇದು ಸಾರ್ವಜನಿಕವಾಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಇಂತಹ ಸಂದೇಶದಿಂದ ಅಲ್ಲಿನ ಜನ ಭಯಭೀತರಾಗಿದ್ದು,ಮುಂದೇನಪ್ಪಾ ಎನ್ನುತ್ತಿದ್ದಾರೆ. ಹೀಗಾಗಿ ಸಂಬಂಧಿಸಿರುವ ಅಧಿಕಾರಿಗಳು ಈ ರೀತಿ ಸುಳ್ಳು ಸುದ್ದಿ ಹರಡಿತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ.ಈ ಬಗ್ಗೆ ಸ್ಥಳೀಯ ಪೊಲೀಸರು ಸಹ ತನಿಖೆ ನಡೆಸುತ್ತಿದ್ದಾರೆನ್ನಲಾಗಿದೆ.

ಈ ರೀತಿಯಾಗಿ ತಪ್ಪು ಸಂದೇಶ ರವಾನೆ ಆಗುತ್ತಿದೆ ಎನ್ನುವ ಬಗ್ಗೆ ಸ್ಥಳೀಯರೊಬ್ಬರು ಕಾರವಾರದ ಮಲಾದೇವಿ ಎನ್ನುವ ಗ್ರೂಪ್‌ನಲ್ಲಿ ಜಾಗೃತಿಗಾಗಿ ಸಂದೇಶವನ್ನ ಹಾಕಿದ್ದು, ಕೆಲವರು ಅವರು ಹಾಕಿರುವ ಸಂದೇಶವನ್ನೆ ತಪ್ಪಾಗಿ ಅರ್ಥೈಸಿಕೊಂಡು ಆವರೆ ತಪ್ಪು ಸಂದೇಶ ನೀಡುತ್ತಿದ್ದಾರೆನ್ನುವ ರೀತಿಯಲ್ಲಿ ಬೇರೆ ಬೇರೆ ವಾಟ್ಸಾಪ್ ಗ್ರೂಪ‌ನಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಈ ಬಗ್ಗೆ ಅವರು ಖುದ್ದು ಸುದ್ದಿ ಬಿಂದು ಸಂಪರ್ಕಿಸಿದ್ದು, ಈ ರೀತಿಯಾಗಿ ಚರ್ಚೆಗಳು ನಡೆಯುತ್ತಿದೆ. ಅದು ಸುಳ್ಳು ಎಂದು ತಿಳಿಸುವ ಉದ್ದೇಶದಿಂದ ಮೆಸೇಜ್ ಮಾಡಿದ್ದೆ. ಆದರೆ ಇದನ್ನ ಬೇರೆ ರೀತಿಯಲ್ಲಿ ಚರ್ಚೆ ಮಾಡಲಾಗುತ್ರಿದೆ ಎಂದು ತಿಳಿಸಿದ್ದಾರೆ.

ಗಮನಿಸಿ