suddibindu.in
ಕಾರವಾರ: ಮುಡಾ ಹಗರಣದ (muda scam) ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM) ಅವರ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ರಾಜ್ಯಪಾಲ ಥಾವರಚಂದ್ ಗೆಹಲೋಟ್ (thawarchandgehlot) ಅನುಮತಿ ನೀಡಿರುವುದನ್ನು ಖಂಡಿಸಿ ಇಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಉತ್ತರ ಕನ್ನಡ (uttara Kannada) ಜಿಲ್ಲಾ ಕೇಂದ್ರ ಕಾರವಾರದಲ್ಲ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾವಿರಾರೂ ಕಾರ್ಯಕರ್ತರು ಭಾಗವಹಿಸಿದ್ದರು. ಕೇಂದ್ರ ಸರಕಾರ, ರಾಜ್ಯಪಾಲ ಥಾವರಚಂದ್ ಗೆಹಲೋಟ್, ಬಿಜೆಪಿ-ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿ ನಾಯಕರನ್ನು ವಿರೋಧಿಸುವ ಫಲಕಗಳನ್ನು ಹಿಡಿದು ಪ್ರತಿಭಟನೆ ಮಾಡಿದರು.ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿದ ಕಾಂಗ್ರೆಸ್ ಪ್ರತಿಭಟನಾಕಾರರು ಬಿಜೆಪಿ ನಾಯಕರ ವಿರುದ್ಧ ಘೋಷಣೆ ಹಾಕಿದರು. ಬಳಿಕ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಅವರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ
- “105 ವರ್ಷಗಳ ಬಳಿಕ ಕೆಡಿಸಿಸಿ ಬ್ಯಾಂಕ್ನ ಇತಿಹಾಸದಲ್ಲಿ ದಿಟ್ಟ ಮಹಿಳೆಯ ಹೊಸ ಅಧ್ಯಾಯ”
- ಶಾಲೆಗಳಿಗೆ ಇನ್ನೂ ಹತ್ತು ದಿನ ರಜೆ ವಿಸ್ತರಣೆ : ಸಿ ಎಂ ಸಿದ್ದರಾಮಯ್ಯ
- ಶಾಲಾ ಸಮಯದ ಬದಲಾವಣೆ : ಶಿಕ್ಷಕರ ಸಂಘಟನೆ ವಿರೋಧ
ಸಚಿವ ಮಂಕಾಳ ವೈದ್ಯ ಮಾತನಾಡಿ, ಗ್ಯಾರಂಟಿಗಳನ್ನು ಜಾರಿ ಮಾಡುವುದಿಲ್ಲ ಬಿಜೆಪಿಗರು ಹೇಳಿಕೊಂಡು ಬಂದಿದ್ದರು. ಆದರೆ ಅದರಲ್ಲಿ ಸರಕಾರ ಸಫಲವಾಗಿದೆ. ಹೀಗಾಗಿ ಅವರೇ ಮಾಡಿದ ತಪ್ಪನ್ನು ಮುಖ್ಯಮಂತ್ರಿ ಅವರ ಮೇಲೆ ಹೊರಿಸಿ ಸಿಲುಕಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ರಾಜ್ಯಪಾಲರನ್ನು ಉಪಯೋಗಿಸಿಕೊಂಡಿದ್ದಾರೆ. ತಕ್ಷಣ ಅನುಮತಿಯನ್ನು ಹಿಂಪಡೆಯದಿದ್ದರೆ ಗ್ರಾಮ ಪಂಚಾಯತಿ ಮಟ್ಟದಲ್ಲಿಯೂ ಪ್ರತಿಭಟನೆ ಮಾಡುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಆಡಳಿತದ ಸುಧಾರಣೆ ಅಧ್ಯಕ್ಷ ಆರ್ ವಿ ದೇಶಪಾಂಡೆ, ಕಾರವಾರ ಶಾಸಕ ಸತೀಶ ಸೈಲ್ , ಶಿರಸಿ ಶಾಸಕ ಭೀಮಣ್ಣ ನಾಯ್ಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಕಾಂಗ್ರೆಸ್ ಮುಖಂಡ ರವೀಂದ್ರನಾಥ ನಾಯ್ಕ ಶಿರಸಿ, ಕೆಪಿಸಿಸಿ ಜಿಲ್ಲಾ ವಕ್ತಾರ ಶಂಭು ಶೆಟ್ಟಿ, ನಿವೇದಿತಾ ಆಳ್ವಾ ಸೇರಿ ಕಾಂಗ್ರೆಸ್‌ನ ಹಲವು ಮುಖಂಡರು ಪ್ರತಿಭಟನೆಯಲ್ಲ ಪಾಲ್ಗೊಂಡಿದ್ದರು.